More

    ಕೌರವ, ಪಾಂಡವರಂತೆ ಎರಡು ಪಾಳಯವಾಗಿದೆ ದೇಶ ರಾಜಕಾರಣ: ಅಮಿತ್ ಶಾ

    ನವ ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿರುವ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ನೇತೃತ್ವದ ಪಾಳೆಯವನ್ನು ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಡಿಯಲ್ಲಿ “INDIA” ಮೈತ್ರಿ ಕೂಟ ಕುಟುಂಬ ನಡೆಸುವ ಪಕ್ಷಗಳಿಂದ ತುಂಬಿದೆ ಎಂದು ಪ್ರತಿಪಾದಿಸಿದ್ದಾರೆ.

    ಇದನ್ನೂ ಓದಿ:  ಕೇರಳದ ನ್ಯೂಸ್​ ಚಾನೆಲ್‌ ಬ್ಯಾಂಕ್‌ ಅಕೌಂಟ್‌ ಸ್ಥಗಿತ..! ಇದರಲ್ಲಿದೆಯೇ ಡಿ.ಕೆ.ಶಿ ಹೂಡಿಕೆ?

    ಇಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ಮತ್ತು ತುಷ್ಟೀಕರಣದ ರಾಜಕೀಯವನ್ನು ಉತ್ತೇಜಿಸುವ ಪ್ರತಿಪಕ್ಷಳು “INDIA” ಬಣದಲ್ಲಿವೆ ಎಂದು ಟೀಕಿಸಿದರು.

    ಮಹಾಭಾರತ ಯುದ್ಧದಲ್ಲಿ ಕೌರವರು ಮತ್ತು ಪಾಂಡವರು ಎಂಬ ಎರಡು ಪಾಳಯಗಳಿದ್ದಂತೆ ಇಂದು ಚುನಾವಣೆಗೂ ಮುನ್ನ ಎರಡು ಪಾಳೆಯಗಳಿವೆ. ಅದರಲ್ಲಿ ಒಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ, ಇನ್ನೊಂದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಎಂದು ಹೇಳಿದರು.ವಿರೋಧ ಪಕ್ಷಗಳ ಮೈತ್ರಿಕೂಟ ವಂಶಪಾರಂಪರ್ಯ, ಭ್ರಷ್ಟಾಚಾರ, ತುಷ್ಟೀಕರಣದ ರಾಜಕೀಯವನ್ನು ಪೋಷಿಸುತ್ತದೆ, ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರದ ತತ್ವಗಳನ್ನು ಅನುಸರಿಸುವ ಪಕ್ಷಗಳ ಮೈತ್ರಿಯಾಗಿದೆ” ಈ ಬಾರಿ ಯಾವುದಕ್ಕೆ ಜನಾದೇಶ ನೀಡಬೇಕೆಂದು ದೇಶದ ಜನರು ನಿರ್ಧರಿಸಬೇಕು ಎಂದು ಅವರು ಹೇಳಿದರು.
    ವಿರೋಧ ಪಕ್ಷಗಳು 2ಜಿ, 3ಜಿ ಮತ್ತು 4ಜಿ” ಪಕ್ಷಗಳಿಂದ ತುಂಬಿದೆ. ಕುಟುಂಬಗಳ ಎರಡು, ಮೂರು ಮತ್ತು ನಾಲ್ಕನೇ ತಲೆಮಾರು ಈ ಪಕ್ಷಗಳನ್ನು ಮುನ್ನಡೆಸುತ್ತಿವೆ. “INDIA”ಮೈತ್ರಿಕೂಟಗಳ ವಂಶಾಡಳಿತ, ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಜಾತಿ ರಾಜಕಾರಣವನ್ನು ಕೊನೆಗಾಣಿಸುವ ಮೂಲಕ ಪ್ರಧಾನಿ ಮೋದಿ ಅಭಿವೃದ್ಧಿಯ ರಾಜಕಾರಣವನ್ನು ಕೇಂದ್ರದ ಹಂತದಲ್ಲಿ ತಂದಿದ್ದಾರೆ ಎಂದು ಹೇಳಿದರು.

    ರಾಮ ಮಂದಿರ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತುಷ್ಟೀಕರಣ ರಾಜಕಾರಣದಿಂದ ಅವರು ಹಾಗೆ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿಯಲ್ಲಿ ಕೌಟುಂಬಿಕ ರಾಜಕಾರಣ ಇದ್ದಿದ್ದರೆ ಟೀ ಮಾರುವವನ ಮಗ ದೇಶದ ಪ್ರಧಾನಿಯಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

    ಪುತ್ರಿ ಭವಿಷ್ಯಕ್ಕಾಗಿ ಪ್ರಧಾನಿ ಸ್ಥಾನವನ್ನೇ ತ್ಯಜಿಸಿದ ನವಾಜ್​ ಷರೀಫ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts