ತಾಜ್‌ಮಹಲ್‌ ನೋಡುವ ವೇಳೆ ಮೆಟ್ಟಿಲಿನಿಂದ ಜಾರಿಬಿದ್ದ ಮಹಿಳೆ!

taj mahal
Published on

ನವದೆಹಲಿ: ತಾಜ್​​ಮಹಲ್‌ ವೀಕ್ಷಿಸಲು ಬಂದಿದ್ದ ಮಹಿಳಾ ಪ್ರವಾಸಿ ಕಾಲು ಜಾರಿಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಿರುವ ಘಟನೆ ನವದೆಹಲಿಯಲ್ಲಿ ವರದಿಯಾಗಿದೆ.

ಗಾಯಾಳು ಮಹಿಳೆಯನ್ನು ಮನೋರಮಾ ದೇವಿ ಎಂದು ಗುರುತಿಸಲಾಗಿದ್ದು, ತನ್ನ ಪತಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ದೆಹಲಿಯ ಆಗ್ರಾದಲ್ಲಿರುವ ತಾಜ್​​ಮಹಲ್‌ ವೀಕ್ಷಿಸಲು ಬಂದಿದ್ದರು. ಈ ವೇಳೆ ರಾಯಲ್ ಗೇಟ್ ಮುಂದೆ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಂಡಿದ್ದಾರೆ. ತದನಂತರ ಕೆಳಗೆ ಇಳಿಯಲು ಹೆಜ್ಜೆಯಿಟ್ಟಾಗ ಕಾಲು ಜಾರಿ ಬಿದ್ದಿದ್ದಾರೆ. ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸುತ್ತಮುತ್ತಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ತಕ್ಷಣ ಸಹಾಯಕ್ಕೆ ಧಾವಿಸಿ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ತಾಜ್​​ಮಹಲ್ ಮುಂದೆ ಹಾಜರಿದ್ದ ಕೆಲವು ಛಾಯಾಗ್ರಾಹಕರು ಘಟನೆಗೆ ಪ್ರತಿಕ್ರಿಯೆ ನೀಡಿದ್ದು, ರಾಯಲ್ ಗೇಟ್ ವೇದಿಕೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸವೆತ ಮತ್ತು ಶೀತದ ಕಾರಣ ನೆಲ ಜಾರುತ್ತಿದೆ. ಇದರಿಂದ ಪ್ರವಾಸಿಗರು ಆಗಾಗ್ಗೆ ಜಾರಿ ಬೀಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net