

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಇಂದು ಯಶಸ್ವಿ ಉಡಾವಣೆಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಚಂದ್ರಯಾನ-3 ಉಡಾವಣೆಯಾಗಿ ಯಶಸ್ವಿಯಾಗಿ ಕಕ್ಷೆಗೆ ಸೇರಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟ್ವಿಟರ್ನಲ್ಲಿ ಕೂಡ ಅದು ಟಾಪ್ ಟ್ರೆಂಡಿಂಗ್ನಲ್ಲಿದೆ. ಉಡಾವಣೆಯಾಗಿ ಗಂಟೆಗಳು ಕಳೆದರೂ ಜನರು ಇನ್ನೂ ಅದರ ಬಗ್ಗೆ ಮಾತನಾಡುತ್ತಿದ್ದು, ಬೆಂಗಳೂರು ಪೊಲೀಸರು ಕೂಡ ಅದೇ ಗುಂಗಿನಲ್ಲಿದ್ದಾರೆ. ಮಾತ್ರವಲ್ಲ, ಆ ಮೂಲಕವೇ ವಿಶೇಷವಾದ ಜಾಗೃತಿ ನಡೆಸಿದ್ದಾರೆ.
ಜೀವನದಲ್ಲಿ ಗುರಿ ಎತ್ತರಕ್ಕೆ ಇರಲಿ ಎಂದು ಯಾರಾದರೂ ಹೇಳಿದಾಗ ನಿಮ್ಮ ಗುರಿ ಹೀಗಿರಲಿ ಎಂದು ಅವರು ಚಂದ್ರಯಾನದ ಫೋಟೋ ಮೂಲಕ ತೋರಿಸಿದ್ದಾರೆ. “Aim high in life” ಎಂದಾಗ ಡ್ರಗ್ಸ್ನ high ಆಗಿರದಿರಲಿ ಎಂದು ಅವರು ಚಂದ್ರಯಾನ ಮತ್ತು ಡ್ರಗ್ಸ್ ಕುರಿತ ಎರಡು ಫೋಟೋಗಳನ್ನು ಜೊತೆಗೇ ಇರಿಸಿ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.