ಈ ಮೂರು ರಾಶಿಯ ಮಹಿಳೆಯರಲ್ಲಿ ನಾಯಕತ್ವ ಗುಣ ಹೆಚ್ಚಿರುತ್ತದೆಯಂತೆ! ನೀವೂ ಇದೇ ರಾಶಿನಾ? Zodiac Signs

Zodiac Signs
Published on

Zodiac Signs : ಈ ಆಧುನಿಕ ಕಾಲದ ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳೆದಿದ್ದಾರೆ. ಅಡುಗೆ ಮಾಡುವುದಕ್ಕೂ ಸೈ, ಬಂದೂಕು ಹಿಡಿದು ಯುದ್ಧ ಭೂಮಿಯಲ್ಲಿ ಹೋರಾಡುವುದಕ್ಕೂ ಸೈ ಅಂತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ.

ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯದ ಜೀವನ, ಪ್ರೇಮ ಜೀವನ, ಆರ್ಥಿಕ ಪರಿಸ್ಥಿತಿ, ವಿಶೇಷ ವ್ಯಕ್ತಿತ್ವ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ, ಕೆಲವು ರಾಶಿಯಲ್ಲಿ ಜನಿಸಿದ ಮಹಿಳೆಯರು ಪ್ರಬಲ ವ್ಯಕ್ತಿತ್ವದೊಂದಿಗೆ ಜನಿಸುತ್ತಾರೆಂದು ಜ್ಯೋತಿಷ್ಯ ಹೇಳುತ್ತದೆ. ಈ ರಾಶಿಯ ಮಹಿಳೆಯರನ್ನು ನಿಯಂತ್ರಿಸುವುದು ಯಾರಿಗೂ ಅಸಾಧ್ಯವಂತೆ.

ಹಾಗಾದರೆ, ಯಾವ ರಾಶಿಯ ಮಹಿಳೆಯರು ಭವಿಷ್ಯದಲ್ಲಿ ಮಹಾನ್ ನಾಯಕಿಯರಾಗುವ ಅದೃಷ್ಟಶಾಲಿಗಳಾಗಿರುತ್ತಾರೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

Aries

ಮೇಷ ರಾಶಿಯಲ್ಲಿ ಜನಿಸಿದ ಮಹಿಳೆಯರು ರೋಮಾಂಚಕ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದ್ದಾರೆ. ಏಕೆಂದರೆ, ಅವರನ್ನು ಯುದ್ಧ ಗ್ರಹವಾದ ಮಂಗಳ ಆಳುತ್ತದೆ. ಅವರು ಸ್ವಾಭಾವಿಕವಾಗಿ ಅತ್ಯುತ್ತಮ ನಾಯಕತ್ವ ಗುಣಗಳು ಮತ್ತು ಹಣಕಾಸು ನಿರ್ವಹಣಾ ಕೌಶಲ್ಯಗಳನ್ನು ಹೊಂದಿರುತ್ತಾರೆ. ಅವರು ಎಲ್ಲಿದ್ದರೂ ರಾಣಿಯಂತೆ ನಡೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಅವರು ತಮ್ಮ ಗುರಿಗಳನ್ನು ನಿರ್ಭಯವಾಗಿ ಅನುಸರಿಸುತ್ತಾರೆ ಮತ್ತು ಅವರ ಈ ವ್ಯಕ್ತಿತ್ವವು ಅವರನ್ನು ನಾಯಕಿಯರನ್ನಾಗಿ ಮಾಡುತ್ತದೆ.

ಸಿಂಹ ರಾಶಿ

Leo Zodiac Signs

ಸೂರ್ಯನ ಆಳ್ವಿಕೆಯಲ್ಲಿರುವ ಸಿಂಹ ರಾಶಿಯವರು ಆಕರ್ಷಕ ಶಕ್ತಿಯನ್ನು ಹೊರಸೂಸುತ್ತಾರೆ. ಈ ರಾಶಿಯ ಮಹಿಳೆಯರು, ತಮ್ಮತ್ತ ಜನರನ್ನು ಸೆಳೆಯುವ ಕಾಂತೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇತರರ ಮೇಲೆ ತಮ್ಮ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯದೊಂದಿಗೆ ಜನಿಸುತ್ತಾರೆ. ಅವರ ಆತ್ಮವಿಶ್ವಾಸ ಮತ್ತು ಮನ್ನಣೆಯ ಬಯಕೆ ಅವರನ್ನು ನಾಯಕತ್ವದ ಪಾತ್ರಗಳಿಗೆ ತಳ್ಳುತ್ತದೆ. ಅಲ್ಲದೆ, ಅವರು ರಾಣಿಯಾಗಬಹುದಾದ ಸ್ಥಳದಲ್ಲಿರಲು ಮಾತ್ರ ಬಯಸುತ್ತಾರೆ.

ಮಕರ ರಾಶಿ

Capricorn Zodiac Signs

ಶನಿಯಿಂದ ಆಳಲ್ಪಡುವ ಮಕರ ರಾಶಿಯವರು ಜೀವನದಲ್ಲಿ ನ್ಯಾಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತಮ್ಮ ಸ್ವಾತಂತ್ರ್ಯಕ್ಕೂ ನೀಡುತ್ತಾರೆ. ಅವರ ಕಠಿಣ ಪರಿಶ್ರಮ ಮತ್ತು ಗುರಿಗಳತ್ತ ಅವರ ಕಾರ್ಯತಂತ್ರದ ವಿಧಾನವು ಅವರನ್ನು ಉನ್ನತ ಸ್ಥಾನಕ್ಕೇರಿಸುತ್ತದೆ. ಮಕರ ರಾಶಿಯವರು ಇತರರನ್ನು ಯಶಸ್ಸಿನತ್ತ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. ಇತರರು ಅಸೂಯೆಪಡುವಂತಹ ಅಧಿಕಾರದ ಸ್ಥಾನಗಳನ್ನು ಅವರು ಖಂಡಿತವಾಗಿಯೂ ಕಂಡುಕೊಳ್ಳುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net