

Zodiac Signs : ಸಾಮಾನ್ಯವಾಗಿ ಇತರರ ಬಗ್ಗೆ ಯೋಚಿಸುವ ಜನರನ್ನು ನೋಡುವುದು ಬಹಳ ಅಪರೂಪ. ಈ ಆಧುನಿಕ ಜಗತ್ತಿನಲ್ಲಿ ಮಾನವೀಯತೆ ಅನ್ನೋದು ಒಂದು ರೀತಿ ಮರೀಚಿಕೆಯಾಗಿದೆ. ಸಹಾಯ ಅನ್ನೋದು ಒಂದು ಮಾನವೀಯ ಗುಣ. ಒಳ್ಳೆಯ ಮನಸ್ಸಿದ್ದವರು ಮಾತ್ರ ಇತರರ ಕಷ್ಟವನ್ನು ಅರಿತು ಸಹಾಯ ಮಾಡುತ್ತಾರೆ. ಆದರೆ, ಅಂತಹ ವ್ಯಕ್ತಿಗಳು ಸಿಗುವುದು ತುಂಬಾನೇ ವಿರಳವಾಗಿದೆ.
ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು, ಇತರರಿಗೆ ಸಹಾಯ ಮಾಡುವ ಉದಾತ್ತ ಗುಣವನ್ನು ಹೊಂದಿರುತ್ತಾರಂತೆ. ಹಾಗಾದರೆ, ಯಾವ ರಾಶಿಯವರು ಕಷ್ಟದಲ್ಲಿದ್ದವರ ಕಣ್ಣೀರನ್ನು ಒರೆಸುವ ಉದಾತ್ತ ಗುಣಗಳೊಂದಿಗೆ ಜನಿಸುತ್ತವೆ ಎಂಬುದನ್ನು ನಾವೀಗ ತಿಳಿಯೋಣ.
ಮೀನ ರಾಶಿ ಅಡಿಯಲ್ಲಿ ಜನಿಸಿದ ಜನರು ಸ್ವಭಾವತಃ ತುಂಬಾ ಕರುಣಾಮಯಿಗಳಾಗಿರುತ್ತಾರೆ. ಅವರು ತಮ್ಮನ್ನು ತಾವು ಕಾಳಜಿ ವಹಿಸುವಷ್ಟೇ ಇತರರ ಕಾಳಜಿ ವಹಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಇತರರ ನೋವು ಮತ್ತು ಸಂಕಟಗಳನ್ನು ಹೇಳದಿದ್ದರೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದ್ದರಿಂದ, ಅವರು ಸಾಮಾಜಿಕ ಸೇವೆಗಳು ಮತ್ತು ಆಧ್ಯಾತ್ಮಿಕ ದಾನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಈ ರಾಶಿಚಕ್ರ ಚಿಹ್ನೆಗಳು ಖಂಡಿತವಾಗಿಯೂ ತಮಗಾಗಿ ಏನನ್ನೂ ಇಟ್ಟುಕೊಳ್ಳುವ ಬಗ್ಗೆ ಯೋಚಿಸದೆ ಇತರರ ಅಗತ್ಯಗಳನ್ನು ಪೂರೈಸುವ ಗುಣವನ್ನು ಹೊಂದಿರುತ್ತವೆ.
ಸೂರ್ಯನ ಆಳ್ವಿಕೆಯಲ್ಲಿ ಜನಿಸಿದ ಸಿಂಹ ರಾಶಿಯವರು ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಭೂಮಿಯನ್ನು ರಕ್ಷಣೆ ಮಾಡುವ ಚೈತನ್ಯ ಮತ್ತು ಸಮೃದ್ಧಿಯ ಗ್ರಹವಾದ ಸೂರ್ಯನಿಂದ ಆಳಲ್ಪಡುವ ಈ ರಾಶಿಯವರು ಇತರರಿಗೆ ಸಹಾಯ ಮಾಡುವ ನೈಸರ್ಗಿಕ ಬಯಕೆಯನ್ನು ಹೊಂದಿರುತ್ತಾರೆ. ಅವರ ಬಳಿ ಬಹಳಷ್ಟು ಹಣವಿದ್ದರೂ ಅಥವಾ ಸ್ವಲ್ಪವೇ ಇದ್ದರೂ, ಅವರ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಸಹಾಯ ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ.
ಧನುಸ್ಸು ರಾಶಿಯಲ್ಲಿ ಜನಿಸಿದವರು ಪ್ರಗತಿ ಮತ್ತು ಅಭಿವೃದ್ಧಿಯ ಗ್ರಹವಾದ ಗುರುವಿನ ಆಳ್ವಿಕೆಯಲ್ಲಿರುತ್ತಾರೆ. ಆದ್ದರಿಂದ ಅವರು ಔದಾರ್ಯದಿಂದ ತುಂಬಿರುತ್ತಾರೆ. ಈ ರಾಶಿಯವರು ಜಗತ್ತನ್ನು ಎಲ್ಲರಿಗೂ ಉತ್ತಮ ಸ್ಥಳವನ್ನಾಗಿ ಮಾಡಲು ಹೋರಾಡುವ ಒಳ್ಳೆಯ ಮನೋಭಾವವನ್ನು ಹೊಂದಿರುತ್ತಾರೆ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ಯಾವಾಗಲೂ ಒಂದು ಉದಾತ್ತ ಉದ್ದೇಶದಿಂದ ಪ್ರೇರಣೆಗೆ ಒಳಗಾಗುತ್ತಾರೆ. ಇತರರಿಗೆ ಸಹಾಯ ಮಾಡುವಾಗ ಅವರು ಹೆಚ್ಚಿನ ಸಂತೋಷವನ್ನು ಅನುಭವಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.