ಈ 3 ರಾಶಿಯ ಪುರುಷರಿಗೆ ಶ್ರೀಮಂತ ವಧುವನ್ನು ವರಿಸುವ ಯೋಗವಿದೆಯಂತೆ! ನೀವೂ ಇದೇ ರಾಶಿನಾ? Zodiac Signs

Zodiac Signs
Published on

Zodiac Signs : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ತಮ್ಮ ವಿವಾಹದ ಬಗ್ಗೆ ಅನೇಕರು ಬಗೆಬಗೆಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಕೆಲವರು ತನಗೆ ಸುಂದರವಾದ ಕನ್ಯೆ ಸಿಗಲೆಂದು ಬಯಸಿದರೆ, ಇನ್ನು ಕೆಲವರು ಒಳ್ಳೆಯ ನಡೆ, ನುಡಿ ಇರುವ ವಧು ಸಿಗಲೆಂದು ಆಶಿಸುತ್ತಾರೆ. ಕೆಲವರಂತೂ ಹಣಕಾಸು ಹೆಚ್ಚಾಗಿರುವ ಸಾಕ್ಷಾತ್​ ಲಕ್ಷ್ಮೀ ದೇವಿಯಂತಹ ಹೆಣ್ಣು ಸಿಗಲೆಂದು ಕೋರಿಕೊಳ್ಳುತ್ತಾರೆ. ಅದೇ ರೀತಿ ಮಹಿಳೆಯರು ಕೂಡ ಆರ್ಥಿಕವಾಗಿ ಬಲವಾಗಿರುವ ಮತ್ತು ಒಳ್ಳೆಯ ಗುಣಗಳನ್ನು ಹೊಂದಿರುವ ಗಂಡ ಸಿಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಆದರೆ, ಎಲ್ಲವು ಅಂದುಕೊಂಡಂತೆ ನಡೆದರೆ ಆ ಜೀವನಕ್ಕೆ ಸ್ವಾರಸ್ಯಕರವೇ ಇರುವುದಿಲ್ಲ. ಹೀಗಾಗಿ, ವಿಧಿ ಮನುಷ್ಯರ ಜೀವನದಲ್ಲಿ ನಾನಾ ರೀತಿಯ ಆಟಗಳನ್ನು ಆಡುತ್ತದೆ.

ಅಂದಹಾಗೆ, ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ.

ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರಿಗೆ ಕೋಟ್ಯಾಧಿಪತಿ ಮನೆಯೊಂದಿಗೆ ಸಂಬಂಧ ಬೆಳೆಸುವ ಅದೃಷ್ಟ ಹೊಂದಿರುತ್ತಾರಂತೆ. ಅವರು ಮದುವೆಯಾಗುವ ವಧು ಆರ್ಥಿಕವಾಗಿ ಪ್ರಬಲರಾಗಿರುತ್ತಾರಂತೆ. ಹಾಗಾದರೆ, ಯಾವ ಪುರುಷ ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನ ಸಂಗಾತಿಯಾಗಿ ಶ್ರೀಮಂತ ಹೆಂಡತಿಯನ್ನು ಪಡೆಯುವ ಸಾಧ್ಯತೆ ಹೆಚ್ಚು ಎಂಬುದನ್ನು ನಾವೀಗ ತಿಳಿಯೋಣ.

ವೃಷಭ ರಾಶಿ

Taurus Zodiac Signs

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿ ಲೌಕಿಕ ಸುಖಗಳ ಅಧಿಪತಿಯಾದ ಶುಕ್ರನ ಆಳ್ವಿಕೆಯಲ್ಲಿ ಜನಿಸುತ್ತಾರೆ. ಆದ್ದರಿಂದ ಅವರು ಐಷಾರಾಮಿ ಜೀವನದ ಬಗ್ಗೆ ಅತಿಯಾದ ಬಯಕೆ ಹೊಂದಿರುತ್ತಾರೆ. ಈ ಗುಣ ಮತ್ತು ಅದೃಷ್ಟದಿಂದಾಗಿ, ಅವರ ಸಂಗಾತಿಯು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಅದೃಷ್ಟಶಾಲಿ ದೇವತೆಯಾಗಿ ಅವರ ಜೀವನದಲ್ಲಿ ಬರುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಪುರುಷರು ಶ್ರೀಮಂತ ಸಂಗಾತಿಯ ಹೃದಯವನ್ನು ತೆರೆಯುವಲ್ಲಿ ಪ್ರಮುಖರಾಗಿರುತ್ತಾರೆ. ಅವರು ಹಣವನ್ನು ಆಕರ್ಷಿಸುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯಲ್ಲಿ ಜನಿಸಿದ ಪುರುಷರು ತಮ್ಮ ಕಾಳಜಿಯುಳ್ಳ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಜೀವನ ಸಂಗಾತಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ದೃಢನಿಶ್ಚಯ ಹೊಂದಿರುತ್ತಾರೆ. ಸಾಮರಸ್ಯದ ಮನೆಯ ವಾತಾವರಣವನ್ನು ಸೃಷ್ಟಿಸುವ ಕರ್ಕಾಟಕ ರಾಶಿಯ ಪುರುಷನ ಜೀವನ ಸಂಗಾತಿಯಾಗುವ ಮಹಿಳೆ ಹೆಚ್ಚಾಗಿ ಕೋಟಿಗಳ ಒಡತಿಯಾಗಿರುತ್ತಾರೆ. ಅವರ ರಾಶಿಚಕ್ರ ಚಿಹ್ನೆಗಳು ಈ ಪುರುಷರನ್ನು ಶ್ರೀಮಂತ ಹೆಂಡತಿಯರ ಕಡೆಗೆ ಕರೆದೊಯ್ಯುತ್ತವೆ. ಅವರ ವಿವಾಹವು ಪ್ರೇಮ ವಿವಾಹವಾಗಿದ್ದರೂ ಸಹ, ಹೆಂಡತಿ ಖಂಡಿತವಾಗಿಯೂ ಶ್ರೀಮಂತ ಮಹಿಳೆಯಾಗಿರುತ್ತಾಳೆ.

ತುಲಾ ರಾಶಿ

Libra

ತುಲಾ ರಾಶಿಯವರು ಸ್ವಾಭಾವಿಕವಾಗಿ ಆಕರ್ಷಕ ಮತ್ತು ರಾಜತಾಂತ್ರಿಕ ವ್ಯಕ್ತಿಗಳು. ಈ ಗುಣಗಳು ಅವರು ಸಾಮಾಜಿಕ ವಲಯದಲ್ಲಿ ಶ್ರೀಮಂತರಾಗಲು ಸಹಾಯ ಮಾಡುತ್ತವೆ. ತುಲಾ ರಾಶಿಯವರು ತಮ್ಮ ಜೀವನದಲ್ಲಿ ಸಮತೋಲನ ಮತ್ತು ಸಹಾನುಭೂತಿಯನ್ನು ತರುವ ಜೀವನ ಸಂಗಾತಿಯನ್ನು ಬಯಸುತ್ತಾರೆ. ಅವರ ಪತ್ನಿಯರು ಅವರಿಗಿಂತ ಶ್ರೀಮಂತರು ಮತ್ತು ಸುಂದರರಾಗಿರುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net