

ಮಹಾರಾಷ್ಟ್ರ: ಮಹಾರಾಷ್ಟ್ರದ(Maharashtra) ಮಹಿಳಾ ಶಾಸಕಿಯೊಬ್ಬರು ನಡುರಸ್ತೆಯಲ್ಲೇ ಜೂನಿಯರ್ ಸಿವಿಕ್ ಇಂಜಿನಿಯರ್ನ ಶರ್ಟ್ ಕಾಲರ್ ಹಿಡಿದು ಕಪಾಳಮೋಕ್ಷ(Slap) ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್(Viral) ಆಗಿದೆ.
ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನ ಶಾಸಕಿ ಗೀತಾ ಜೈನ್, ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಯಾವುದೇ ಸೂಚನೆಯಿಲ್ಲದೆ ಮನೆಯೊಂದರಲ್ಲಿ ವಾಸಿಸುತ್ತಿದ್ದವರನ್ನು ಹೊರಹಾಕಿ, ಕಟ್ಟಡವನ್ನು ಕೆಡವಿದ ಕಾರಣಕ್ಕೆ ಸ್ಥಳೀಯ ಎಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.
ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಅವರ ಕುಟುಂಬಸ್ಥರನ್ನು ಬೀದಿಯಲ್ಲಿ ನಿಲ್ಲಿಸಿ, ಮನೆ ಕಡೆವಲು ಮುಂದಾದ ಅಧಿಕಾರಿಗಳ ವಿರುದ್ಧ ಶಾಸಕಿ ಗೀತಾ ಜೈನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಿರಿಯ ನಾಗರಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಆತನ ಕಾಲರ್ ಹಿಡಿದು ನಾಲಾಯಕ್ ಎಂದು ಕರೆದಿದ್ದಾರೆ.
ಈ ಬಗ್ಗೆ ಸ್ಥಳೀಯ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಗೀತಾ ಜೈನ್, "ತಮ್ಮ ಮನೆ ಕೆಡವುತ್ತಿರುವಾಗ ಬೇಸರದಲ್ಲಿದ್ದ ಮಹಿಳೆಯರ ಅಳಲನ್ನು ಪ್ರಶ್ನಿಸುವಾಗ ಅಧಿಕಾರಿಗಳು ನಗುತ್ತಿರುವುದನ್ನು ಕಂಡು ನನಗೆ ಅತೀವ ಬೇಸರವಾಯಿತು. ಇದೇ ಕಾರಣಕ್ಕೆ ಇಂಜಿನಿಯರ್ನನ್ನು ಕರೆದು ಕಪಾಳಮೋಕ್ಷ ಮಾಡಿದೆ. ಇದು ನನ್ನ ಸಹಜ ಪ್ರತಿಕ್ರಿಯೆ! ನಾನು ಮಾಡಿದ್ದು ತಪ್ಪಲ್ಲ, ಅದಕ್ಕೆ ಕ್ಷಮೆಯೂ ಕೇಳುವುದಿಲ್ಲ ಎಂದು ಪ್ರತಿಪಾದಿಸಿದರು.