More

    17 ಸಾವಿರ ಕೊಟ್ಟು ಫೇಶಿಯಲ್​ ಮಾಡಿಸಿಕೊಂಡವಳ ಮುಖ ವಿಕಾರ: ಡಾಕ್ಟರ್​ ಹೇಳಿದ್ದನ್ನು ಕೇಳಿ ಸಂತ್ರಸ್ತೆಗೆ ಶಾಕ್​

    ಮುಂಬೈ: ಫೇಶಿಯಲ್​ ಮಾಡಿದ ಬಳಿಕವೂ ಮುಖದಲ್ಲಿ ಸುಟ್ಟ ಕಲೆಗಳು ಉಳಿದುಕೊಂಡ ಹಿನ್ನೆಲೆಯಲ್ಲಿ ಸಲೂನ್​ ವಿರುದ್ಧ 23 ವರ್ಷದ ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.

    ಮುಂಬೈನ ಅಂಧೇರಿಯಲ್ಲಿರುವ ಸಲೂನ್​ನಲ್ಲಿ ಫೇಶಿಯಲ್​ ಮಾಡಿಸಿಕೊಂಡ ಬಳಿಕ ಮುಖದಲ್ಲಿ ಸುಟ್ಟ ಕಲೆಗಳು ಉಳಿದುಕೊಂಡಿವೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಸಿದ್ದಾಳೆ.

    ಇದನ್ನೂ ಓದಿ: ಎಸ್​ಐ ಅಕ್ರಮ ನ್ಯಾಯಾಂಗ ತನಿಖೆ?: ಸಚಿವ ಸಂಪುಟ ಸಭೆಯಲ್ಲೂ ಚರ್ಚೆ; ಶೀಘ್ರವೇ ಆದೇಶ ನಿರೀಕ್ಷೆ

    ನಿರ್ಲಕ್ಷಿಸಿದರು

    ಜೂನ್​ 17ರಂದು ಸಂತ್ರಸ್ತೆ 17,500 ರೂಪಾಯಿ ಖರ್ಚು ಮಾಡಿ ಫೇಶಿಯಲ್​ ಮಾಡಿಸಿದ್ದಾಳೆ. ಸಲೂನ್ ಸಿಬ್ಬಂದಿ ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಬಳಸಿದ್ದರಿಂದ ನನಗೆ ಅನಾನುಕೂಲವಾಗಿದೆ. ಮುಖದಲ್ಲಾದ ಬದಲಾವಣೆಯ ಬಗ್ಗೆ ಸಲೂನ್​ ಸಿಬ್ಬಂದಿಗೆ ತಿಳಿಸಿದರೂ ಅವರು ನನ್ನನ್ನು ನಿರ್ಲಕ್ಷಿಸಿದರು.

    ವೈದ್ಯರ ಹೇಳಿಕೆ ಶಾಕ್​

    ಇದು ಯಾವುದೋ ಅಲರ್ಜಿಯಿಂದ ಆಗಿರಬಹುದು ಎಂದು ಸಿಬ್ಬಂದಿಯ ಪ್ರತಿಕ್ರಿಯೆ ನೀಡಿದರು. ನಾನೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸುಟ್ಟ ಗಾಯದ ಗುರುತುಗಳು ಶಾಶ್ವತ ಎಂದು ವೈದ್ಯರು ಹೇಳಿದ್ದನ್ನು ಕೇಳಿ ನನಗೆ ಶಾಕ್​ ಆಯಿತು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

    ಇದನ್ನೂ ಓದಿ: ತಂದೆ ವರ್ಗಾವಣೆ, ಮಗಳ ನಿಯೋಜನೆ: ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ

    ಸದ್ಯ ಸಲೂನ್​ ವಿರುದ್ಧ ಯುವತಿ ದೂರು ನೀಡಿದ್ದಾರೆ. ಈ ಸಂಬಂಧ ಅಂಧೇರಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಜೀನಿಯಸ್​ ಮಾತ್ರ ಕೇವಲ 10 ಸೆಕೆಂಡ್​ಗಳಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಹುಡುಕಬಲ್ಲರು!

    ಟೈಟಾನಿಕ್​ ಅವಶೇಷ ವೀಕ್ಷಿಸಲು ಹೋಗಿ ನಾಪತ್ತೆಯಾಗಿದ್ದ ಐವರು ಬದುಕಿರುವ ಸಾಧ್ಯತೆ: ಸಿಕ್ಕಿತು ಮಹತ್ವದ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts