ಯಾರಿವಳು, ಏನಾಗಿತ್ತು?; ಕೊಳೆತ ಸ್ಥಿತಿಯಲ್ಲಿ ಸಿಕ್ತು ಮಹಿಳೆಯ ಶವ!

Dead body
Published on

ನವದೆಹಲಿ: ಮಹಿಳೆಯೊಬ್ಬರ ಶವ ಬಹುತೇಕ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಆಕೆ ಯಾರು ಎಂದು ಪತ್ತೆ ಹಚ್ಚುವುದೇ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಇಂಥದ್ದೊಂದು ಶವ ಕಂಡುಬಂದಿದೆ.

ಮೃತಪಟ್ಟಿರುವ ಮಹಿಳೆಯ ವಯಸ್ಸು 25ರಿಂದ 30 ವರ್ಷಗಳಿರಬಹುದು ಎಂದು ಅಂದಾಜಿಸಿದ್ದು, ಆಕೆಯ ಎತ್ತರ ಸುಮಾರು ಐದಡಿ ಎರಡು ಇಂಚುಗಳಷ್ಟಿದೆ. ಆಕೆಯ ದೇಹದ ಮೇಲೆ ದೈಹಿಕ ಗಾಯದ ಯಾವುದೇ ಗುರುತುಗಳಿಲ್ಲ. ಮಹಿಳೆಯ ಪರಿಚಯ ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಪೂರ್ವ ದೆಹಲಿಯ ಅಶೋಕ ನಗರದ ಚಿಲ್ಲಾ ರೆಗ್ಯುಲೇಟರ್ ಡ್ರೇನ್​ ಬಳಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹತ್ತಿರದ ನ್ಯೂ ಅಶೋಕ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net