More

    ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಭೋಪಾಲ್​: ಕರೊನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿರುವ ವ್ಯಕ್ತಿಯೊಬ್ಬ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಮೃತಪಟ್ಟಿದ್ದಾನೆ. ಜೀವ ಉಳಿಸಲೆಂದೇ ಕಂಡುಹಿಡಿದಿರುವ ಲಸಿಕೆ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಸಾವಿಗೀಡಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಆತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೆ ಕಾರಣ ವಿಷ ಎಂಬುದಾಗಿ ಉಲ್ಲೇಖವಾಗಿರುವುದು ಪ್ರಕರಣದ ಕುರಿತ ಕುತೂಹಲವನ್ನು ಹೆಚ್ಚಿಸಿದೆ.

    ಮಧ್ಯಪ್ರದೇಶದ ಭೋಪಾಲ್​ನ ದೀಪಕ್​ ಮರಾವಿ ಎಂಬ 42 ವರ್ಷದ ವ್ಯಕ್ತಿ ಸ್ವಯಂಪ್ರೇರಿತನಾಗಿ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಆತನಿಗೆ ಡಿಸೆಂಬರ್ 12ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಆದರೆ ಅದಾಗಿ ಹತ್ತೇ ದಿನಗಳಲ್ಲಿ ಈತ ಮೃತಪಟ್ಟಿದ್ದಾನೆ.

    ಮರಾವಿಯ ಶವಪರೀಕ್ಷೆಯ ವರದಿಯಲ್ಲಿ ಸಾವಿಗೆ ಕಾರಣ ವಿಷ ಎಂಬುದಾಗಿದೆ ಎಂದು ಮಧ್ಯಪ್ರದೇಶದ ಮೆಡಿಕೋಲೀಗಲ್​ ಇನ್​ಸ್ಟಿಟ್ಯೂಟ್​ ಡೈರೆಕ್ಟರ್ ಡಾ.ಅಶೋಕ್​ ಶರ್ಮಾ ತಿಳಿಸಿದ್ದಾರೆ. ಇನ್ನೊಂದೆಡೆ, ಮರಾವಿಗೆ ಕೊಟ್ಟಿರುವುದು ಲಸಿಕೆ ಅಥವಾ ಪ್ಲಾಸಿಬೋ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಲಸಿಕೆ ನೀಡಲಾಗಿರುವ ಪೀಪಲ್ಸ್​ ಮೆಡಿಕಲ್​ ಕಾಲೇಜ್ ಆ್ಯಂಡ್​ ಹಾಸ್ಪಿಟಲ್​ನ ವೈಸ್ ಚಾನ್ಸೆಲರ್ ಡಾ.ರಾಜೇಶ್ ಕಪೂರ್​. ಟ್ರಯಲ್​ಗೆ ಬಳಸು ಎಲ್ಲ ವಯಲ್​ಗಳು ಕೋಡ್ ಹೊಂದಿದ್ದು, ಕವರ್ ಆಗಿರುತ್ತವೆ. ಟ್ರಯಲ್ ವೇಳೆ ಶೇ. 50 ಮಂದಿಗೆ ನಿಜವಾದ ಲಸಿಕೆ ನೀಡಲಾಗಿರುತ್ತದೆ, ಉಳಿದ ಶೇ. 50 ಮಂದಿಗೆ ಸಲೈನ್​ ನೀಡಲಾಗಿರುತ್ತದೆ ಎಂದು ಡಾ.ಕಪೂರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಲಸಿಕೆ ಕೊಟ್ಟ ಬಳಿಕ 30 ನಿಮಿಷಗಳ ಕಾಲ ಮರಾವಿಯನ್ನು ಅಬ್ಸರ್ವೇಷನ್​ನಲ್ಲಿ ಇರಿಸಲಾಗಿತ್ತು. ವ್ಯತಿರಿಕ್ತ ಪರಿಣಾಮಗಳಿದ್ದರೆ ಲಸಿಕೆ ಕೊಟ್ಟ 30 ನಿಮಿಷಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ 24ರಿಂದ 48 ಗಂಟೆಗಳ ಅವಧಿಯಲ್ಲೂ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿರಲಿಲ್ಲ ಹಾಗೂ ಆತನ ಆರೋಗ್ಯದ ಮೇಲೆ ನಾವು ಏಳೆಂಟು ದಿನಗಳ ಕಾಲ ನಿಗಾವಹಿಸಿದ್ದೆವು ಎಂದು ಡಾ.ಕಪೂರ್ ಹೇಳಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೆಯೇ ಲಸಿಕೆ ಬಗ್ಗೆ ತಪ್ಪು ಅಭಿಪ್ರಾಯ ಮೂಡದಂತೆ ನೋಡಿಕೊಳ್ಳಬೇಕು. ಈ ಪ್ರಕರಣದ ಸಂಬಂಧ ತನಿಖೆ ನಡೆಸಲಾಗುತ್ತಿದ್ದು ಸದ್ಯದಲ್ಲೇ ವರದಿ ಬರಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್ ಹೇಳಿದ್ದಾರೆ.

    ಮರಾವಿ ಮನೆಗೆ ಬಂದ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿತ್ತು. ಡಿ. 17ರಂದು ಆತ ಭುಜನೋವು ಎಂದು ಹೇಳಿದ್ದ. ಎರಡು ದಿನಗಳ ಬಳಿಕ ಬಾಯಿಯಲ್ಲಿ ನೊರೆ ಬಂದಿತ್ತು. ಆದರೆ ಒಂದೆರಡು ದಿನಗಳಲ್ಲಿ ಸರಿಯಾಗುತ್ತದೆ ಎಂದು ಆತ ವೈದ್ಯರಲ್ಲಿಗೆ ತೆರಳಲು ನಿರಾಕರಿಸಿದ್ದ. ಬಳಿಕ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದರಿಂದ ಡಿ. 21ರಂದು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಮರಾವಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಅಪರಿಚಿತ ಶವದ ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ನೆರವಾಯ್ತು ಸೀರೆ ಸೆರಗಿನ ಗಂಟು!

    ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಬದುಕಿಬಂದ ಗಂಡನನ್ನು ನೋಡಿ ಪತ್ನಿಗೆ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts