

ನ್ಯೂ ಹ್ಯಾಂಪ್ಶೈರ್: ಮತದಾನದ ವೇಳೆ ಮತಗಟ್ಟೆಯಿಂದ ನೂರು ಮಿಟರ್ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗೆ ಅವಕಾಶವಿರುವುದಿಲ್ಲ. ಪ್ರಚಾರವಂತೂ ಮಾಡುವಂತೆಯೇ ಇಲ್ಲ.
ಆದರೆ, ನ್ಯೂ ಹ್ಯಾಂಪ್ಶೈರ್ನ ಎಕ್ಸ್ಟರ್ ಎಂಬಲ್ಲಿ ರಾಜಕೀಯ ಬರಹವಿದ್ದ ಶರ್ಟ್ ಧರಿಸಿದ್ದಕ್ಕೆ ಮತದಾನಕ್ಕೆ ಅವಕಾಶವಿಲ್ಲವೆಂದು ಮಹಿಳೆಗೆ ಅಧಿಕಾರಿ ತಡೆಯೊಡ್ಡಿದ್ದಾರೆ. ಆಕೆ ಧರಿಸಿದ್ದ ಶರ್ಟ್ ಮೇಲೆ ಮ್ಯಾಕ್ ಕ್ಯಾನ್ ಹಿರೋ ಟ್ರಂಪ್ ಝಿರೋ ಎಂದು ಬರೆದಿತ್ತು. ಟ್ರಂಪ್ ಝಿರೋ ಎಂದು ಬರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿ ಮಹಿಳೆಗೆ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಮಹಿಳೆ, ನಾನು ಶರ್ಟ್ ತೆಗೆಯಬೇಕೆಂದು ಬಯಸುತ್ತೀರಾ? ನಾನು ಒಳಗಡೆ ಏನನ್ನೂ ಧರಿಸಿಲ್ಲ ಎನ್ನುತ್ತಾಳೆ ಶರ್ಟ್ ಕಳಚಿದ್ದಾಳೆ. ಅಲ್ಲಿದ್ದವರು ಬೆರಗುಗಣ್ಣಿನಿಂದಲೇ ನೋಡುತ್ತಲೇ ಇದ್ದರು. ಬಳಿಕ ತನ್ನ ಹಕ್ಕನ್ನು ಚಲಾಯಿಸಿ ಅಲ್ಲಿಂದ ತೆರಳಿದ್ದಾಳೆ.
ಆಕೆ ಶರ್ಟ್ ತೆಗೆಯಬೇಕೆಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಹೊರಗೆ ಹೋಗಿ ಅದೇ ಶರ್ಟ್ಅನ್ನು ಒಳಮುಖವಾಗಿ ಧರಿಸಿ ಬಂದಿದ್ದರೂ ಆಗುತ್ತಿತ್ತು. ಅದಕ್ಕೆ ಅವಕಾಶವನ್ನೇ ಕೊಡದೇ ಬಟ್ಟೆ ಕಳಚಿದ್ದಾಳೆ ಎಮದು ಅಧಿಕಾರಿ ಹೇಳಿದ್ದಾರೆ.
ಅಂಥ ಶರ್ಟ್ ಧರಿಸಿದ್ದಕ್ಕೆ ಮತಗಟ್ಟೆಯಿಂದಲೇ ಹೊರಹಾಕಬಹುದಾಗಿತ್ತು. ಆದರೆ, 2,000 ಜನರು ಮತ ಚಲಾಯಿಸಬೇಕಿದೆ. ಎಲ್ಲ ಪ್ರಕ್ರಿಯೆಗಳನ್ನು ಸುರಕ್ಷಿತವಾಗಿ ಮುಗಿಸಬೇಕಿದೆ. ನಮಗೆ ಮಾಡೋಕೆ ಬೇರೆ ಬಹಳಷ್ಟು ಕೆಲಸಗಳಿರೋದರಿಂದ ಈ ವಿಷಯವನ್ನು ದೊಡ್ಡದು ಮಾಡಿಲ್ಲ ಎಂದು ಹೇಳಿದ್ದಾರೆ.