ಇದ್ಯಾವ ಸೀಮೆ ಹೇರ್ ಸ್ಟೈಲ್ ಗುರು…ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ ಯುವತಿಯ ವಿಶಿಷ್ಟ ಕೇಶವಿನ್ಯಾಸ

hair
Published on

ನವದೆಹಲಿ: ವ್ಯಕ್ತಿಯನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಕಾಣುವಂತೆ ಮಾಡಲು ಕೂದಲು ತುಂಬಾ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಜನರು ತಮ್ಮ ಫೇಸ್ ಮತ್ತು ಫೇಸ್ ಕಟ್‌ಗೆ ಅನುಗುಣವಾಗಿ ಕೂದಲನ್ನು ಬಿಡುತ್ತಾರೆ. ಕೆಲವರು ಉದ್ದ ಕೂದಲು ಬೇಕೆಂದು ಇಷ್ಟಪಟ್ಟರೆ, ಮತ್ತೆ ಕೆಲವರು ಚಿಕ್ಕ ಕೂದಲನ್ನು ಬಹಳ ಇಷ್ಟಪಡುತ್ತಾರೆ. ಒಟ್ಟಾರೆ ಜನರು ತಮ್ಮ ಮುಖಕ್ಕೆ ಅನುಗುಣವಾಗಿ ತಮ್ಮ ಕೇಶವಿನ್ಯಾಸವನ್ನು ಆರಿಸಿಕೊಳ್ಳುತ್ತಾರೆ. ಇದು ಅವರಿಗೆ ಸ್ಟೈಲೀಶ್ ಆಗಿ ಕಾಣಲು ಸಹಾಯ ಮಾಡುತ್ತದೆ.

ಈ ಹೇರ್ ಸ್ಟೈಲ್ ವಿಚಾರದಲ್ಲಿ ಪುರುಷರು ಅಥವಾ ಮಹಿಳೆಯರು ಎಂಬ ಭೇದವಿಲ್ಲ. ನೀವು ಇಲ್ಲಿಯವರೆಗೂ ಹಲವು ಬಗೆಯ ಹೇರ್ ಸ್ಟೈಲ್ ಗಳನ್ನು ನೋಡಿರಬಹುದು. ಆದರೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಮಹಿಳೆಯ ಹೇರ್ ಸ್ಟೈಲ್ ಅನ್ನು ನೀವು ಎಂದೂ ನೋಡಿರಲಿಕ್ಕಿಲ್ಲ.

ಮಹಿಳೆಯರ ಕೇಶವಿನ್ಯಾಸ ಅಥವಾ ಹೇರ್ ಕಟ್ ಬಗ್ಗೆ ಪರಿಚಯಿಸುವುದಾದರೆ ಜಗತ್ತಿನಲ್ಲಿ ಸುಮಾರು 60 ಸ್ಪೆಷಲ್ ಕೇಶವಿನ್ಯಾಸ ಮತ್ತು ಹೇರ್​​​ ಕಟ್​​​ಗಳಿವೆ. ಬೋಲ್ಡ್ ಪಿಕ್ಸೀ, ಫ್ರೆಂಚ್ ಬಾಬ್, ಬಾಬ್, ಕರ್ಲ್ಸ್, ಚಾಪಿ ಲಾಬ್, ಹೀಗೆ ಅನೇಕ ಹೇರ್‌ಸ್ಟೈಲ್‌ಗಳನ್ನು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಆದರೆ ನೀವು ಎಂದಾದರೂ ಹಾರ್ಸ್ ಕಟ್ ಹೇರ್ ಸ್ಟೈಲ್ ನೋಡಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮಹಿಳೆ ಹಾರ್ಸ್ ಶೈಲಿಯಲ್ಲಿ ಕೂದಲನ್ನು ಕಟ್ ಮಾಡಿಸಿಕೊಂಡಿದ್ದಾರೆ. ಮಹಿಳೆಯ ತಲೆಯ ಮೇಲೆ ಕುದುರೆ ಆಕೃತಿ ನೀವು ನೋಡಬಹುದು. ನಿಮಗೆ ನಂಬಿಕೆ ಇಲ್ಲದಿದ್ದರೆ ಈ

ವೈರಲ್ ವಿಡಿಯೋವನ್ನು ನೋಡಿ... 
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) @ThebestFigen ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 16 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋ ವೀಕ್ಷಿಸಿದ ನಂತರ, ಬಳಕೆದಾರರು "ಇದು ಸೃಜನಾತ್ಮಕವಾಗಿದೆ, ಇಂತಹ ಕ್ಷೌರಿಕನನ್ನು ನಾವು ಎಲ್ಲಿ ಭೇಟಿ ಮಾಡಬಹುದು, ನನಗೆ ಇದು ಬೇಗ ಬೇಕು, ಈಗ ಹೊಸ ಹೇರ್​​ ಸ್ಟೈಲ್ ಪಡೆಯುವ ಸಮಯ ಬಂದಿದೆ. ಇದು ಏನು?" ಎಂದೆಲ್ಲಾ ಕಾಮೆಂಟ್​​​ಗಳನ್ನು ಮಾಡಿದ್ದಾರೆ. ನಿಮಗೂ ಈ ಹೇರ್ ಸ್ಟೈಲ್ ನೋಡಿ ಏನನಿಸಿತು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net