ಒಂದೇ ಸಮನೆ ಅಳುತ್ತಿದ್ದ ಮಗನನ್ನೇ ಕೊಂದ ಪಾಪಿ ತಾಯಿ

baby
Published on

ರಾಂಚಿ: ಫೋನಿನಲ್ಲಿ ಮಾತನಾಡುವಾಗ ಅಳುತ್ತಿದ್ದ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತಾವು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಆರೋಪಿ ಅಫ್ಸಾನಾ ಖಾತೂನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಆರು ವರ್ಷಗಳ ಹಿಂದೆ ನಿಜಾಮುದ್ದೀನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರೋಪಿ ಅಫ್ಸಾನಾ ಮಾವ ರೋಜನ್ ಅನ್ಸಾರಿ, ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಅಫ್ಸಾನಾ ಕಿರಿಯ ಮಗನೊಂದಿಗೆ ಬೇರೊಂದು ಕೋಣೆಯಲ್ಲಿ ಇದ್ದಳು. ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕಿರಿಯ ಮಗ ಅಳಲು ಶುರು ಮಾಡಿದ್ದು, ಸಂತೈಸುವ ಬದಲು ಆಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಕೆಲ ಹೊತ್ತಿನ ಬಳಿಕ ರೂಮಿಗೆ ತೆರಳಿ ಪರಿಶೀಲಿಸಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಆರೋಪಿ ಅಫ್ಸಾನಾ ಮಾವ ರೋಜನ್ ಅನ್ಸಾರಿ ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಆರೋಪಿ ಅಫ್ಸಾನಾ, ನಾನು ಬೇಕಂತ ಈ ರೀತಿ ಮಾಡಿಲ್ಲ. ಅವನು ತುಂಬಾ ಹೊತ್ತು ಅಳುತ್ತಿದ್ದರಿಂದ ಕೋಪಗೊಂಡು ಸುಮ್ಮನಾಗುವಂತೆ ಬೆದರಿಸಲು ಹೋಗಿ ಅವಘಡ ನಡೆದಿದೆ ಎಂದು ಆರೋಪಿ ಅಫ್ಸಾನಾ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net