ಮೃತಪಟ್ಟ ಸಾಕುನಾಯಿಗೆ ಜೀವ ತರಿಸಿದ ಮಹಿಳೆ; ಇದಕ್ಕಾಗಿ ಈಕೆ ಖರ್ಚು ಮಾಡಿದ್ದು ಮಾತ್ರ...

Dog
Published on

ಶಾಂಘೈ: ಮುನುಷ್ಯನು ಅತಿಹೆಚ್ಚು ಇಷ್ಟಪಡುವ ಪ್ರಾಣಿ ಇದ್ದರೆ ಮೊದಲಿಗೆ ಕೇಳಿ ಬರುವುದು ಶ್ವಾನದ ಹೆಸರು. ಆಧುನಿಕ ಯುಗದಲ್ಲಿ ಅನೇಕರು ತಮ್ಮ ಮನೆಗಳಲ್ಲಿ ನಾಯಿಯನ್ನು (Pet Dog) ಸಾಕಿದ್ದು, ಮನೆಯ ಅವಿಭಾಜ್ಯ ಅಂಗ ಎಂಬಂತೆ ಅದನ್ನು ನೋಡಿಕೊಳ್ಳುತ್ತಾರೆ. ಅದಕ್ಕೆ ಏನಾದರೂ ಆದಾಗಲೂ ಹೆಚ್ಚಿನ ಆರೈಕೆ ಮಾಡುತ್ತಾರೆ. ಹಣದ ಬಗ್ಗೆ ಯೋಚನೆ ಮಾಡಲು ಹೋಗುವುದಿಲ್ಲ. ಇದೀಗ ಅಂತಹದ್ದೆ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತಮ್ಮ ಸತ್ತ ನಾಯಿಯನ್ನು ವಾಪಸ್ ಜೀವಂತವಾಗಿರಿಸಲು 19 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಚೀನಾದ ಶಾಂಘೈನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತಮ್ಮ ಸತ್ತ ನಾಯಿಯ ಕ್ಲೋನ್ ಮಾಡಿಸಲು ಬರೋಬ್ಬರಿ 160,000 ಯುವಾನ್ (ಸುಮಾರು ₹19 ಲಕ್ಷ) ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ಈ ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆಯುತ್ತಿದ್ದು, ಮಹಿಳೆಯ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. 

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಸು ಎಂಬ ಹಸೆರಿನ ಮಹಿಳಿಯು ಸಾಕಿದ್ದ ಸಾಯಿ (Pet Dog) ಜೋಕರ್​ 2022ರಲ್ಲಿ ಹೃದಯಾಘಾತವಾಗಿ ಮೃತಪಟ್ಟಿತ್ತು. ಸುಮಾರು 11 ವರ್ಷಗಳ ಕಾಲ ಆ ನಾಯಿ ಕ್ಸು ಅವರ ಜತೆಗಿತ್ತು ಎಂದು ತಿಳಿದು ಬಂದಿದೆ. ನಾಯಿಯೊಂದಿಗಿನ ಅವಿನಾಭಾವ ಸಂಬಂಧದಿಂದ ಹೊರಬರಲಾರದೆ ಕ್ಸು ಅವರು ಕ್ಲೋನಿಂಗ್​ ಮಾಡಿಸುವ ಬಗ್ಗೆ ಯೋಚನೆ ಮಾಡಿದ್ದು, ಇದಕ್ಕಾಗಿ ತಜ್ಞರನ್ನು ಸಂಪರ್ಕಿಸಿದ್ದಾರೆ.

ಕ್ಲೋನಿಂಗ್​ ಮೂಲಕ ತಮ್ಮ ಸಾಕುಪ್ರಾಣಿಯನ್ನು ವಾಪಸ್ ತರುವುದು ಅವರ ಉದ್ಧೇಶವಾಗಿರಲಿಲ್ಲವಾದರು ವೈದ್ಯಕೀಯ ವಿಧಾನದ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಜೋಕರ್‌ನ ತದ್ರೂಪಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಕ್ಲೋನಿಂಗ್ ಮೂಲಕ ಜೋಕರ್​ನ ತದ್ರೂಪಿಯನ್ನು ಕ್ಸು ಪಡೆದಿದ್ದು, ಇದಕ್ಕೆ ಲಿಟಲ್ ಜೋಕರ್ ಎಂದು ನಾಮಕರಣ ಮಾಡಿದ್ದು, ಮಹಿಳೆ ತಮ್ಮ ಶ್ವಾನದ ಮೇಲೆ ಇರಿಸಿರುವ ಪ್ರೀತಿ ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net