ರನ್ಯಾ ಬಳಿಕ ಸ್ಯಾಂಡಲ್​ವುಡ್​ನ ಮತ್ತಿಬ್ಬರು ನಟಿಯರಿಗೆ ಶಾಕ್ ನೀಡಿದ ಪೊಲೀಸರು!

Ranya Rao
Published on

ಬೆಂಗಳೂರು: ಮಾಣಿಕ್ಯ, ಪಟಾಕಿ ಸಿನಿಮಾ ಮೂಲಕ ಸಿನಿರಸಿಕರನ್ನು ರಂಜಿಸಿದ್ದ ನಟಿ ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು, ಇಡೀ ಚಂದೆನವನ್ನೇ ಬೆಚ್ಚಿಬೀಳಿಸಿದೆ. ಸಿಐಡಿ, ಡಿಆರ್​ಐ ಹಾಗೂ ಸಿಬಿಐ ಅಧಿಕಾರಿಗಳು ಆಳಕ್ಕೆ ಇಳಿದು ತನಿಖೆ ನಡೆಸುತ್ತಿದ್ದು, ದಿನ ಕಳೆದಂತೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ರನ್ಯಾ ರಾವ್ ಪ್ರಕರಣ ಜೀವಂತವಿರುವ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಇಬ್ಬರು ನಟಿಮಣಿಯರಿಗೆ ಸಿಸಿಬಿ ಶಾಕ್ ನೀಡಿದ್ದು, ಇವರಿಬ್ಬರಿಗೆ ಸಂಕಷ್ಟ ಎದುರಾಗಿದೆ.

2020ರಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣ ಇದೀಗ ಮತ್ತೊಮ್ಮೆ ಜೀವ ಪಡೆದುಕೊಂಡಿದ್ದು, ಜಾಮೀನಿನ ಮೇಲೆ ಹೊರಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಸಂಕಷ್ಟ ಎದುರಾಗಿದೆ. ಈ ಇಬ್ಬರು ನಟಿಯರ ವಿರುದ್ಧ ದಾಖಲಾಗಿದ್ದ ಎಫಐಆರ್​ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸಿಸಿಬಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದು, ಇದೀಗ ನಟಿಯರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

sanjana,ragini

ಇದೀಗ ಸಿಸಿಬಿ ಹೈಕೋರ್ಟ್ ಎಫ್‌ಐಆರ್‌ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಸಿಸಿಬಿ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೆ ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಮತ್ತೆ ಸಂಕಷ್ಟ ಶುರುವಾಗಲಿದೆ.

ಪ್ರಕರಣದ ಹಿನ್ನೆಲೆ

ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರು ಮಾದಕ ವಸ್ತು ಸರಬರಾಜಿಗೆ ಸಹಕಾರ ನೀಡಿದ್ದಾರೆ. ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ರಾಗಿಣಿ, ಸಂಜನಾ ಜೊತೆಗೆ ಇನ್ನೂ ಕೆಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅದೇ ಸಮಯದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಟ, ನಟಿಯರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಲೂಸ್ ಮಾದ ಯೋಗಿ, ದಿಗಂತ್ ಸೇರಿದಂತೆ ಇನ್ನೂ ಹಲವರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net