ಲವರ್​ ತಂದೆ ಮಾಜಿ ಪ್ರಿಯಕರ... ಭಾವಿ ಮಾವನನ್ನು ಭೇಟಿಯಾಗಲು ಹೋದ ಯುವತಿಗೆ ಕಾದಿತ್ತು​ ಶಾಕ್!​ Woman shocked

Woman shocked
Published on

Woman shocked : ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಒಂದು ಪ್ರಮುಖ ಕ್ಷಣ. ವಿವಾಹ ಎಂದರೆ ಕೇವಲ ಇಬ್ಬರು ವ್ಯಕ್ತಿಗಳ ಸಂಗಮವಲ್ಲ, ಎರಡು ಕುಟುಂಬಗಳ ಸಂಗಮವೂ ಹೌದು. ಹೀಗಾಗಿ ಪರಸ್ಪರ ಪರಿಚಯ ಅಗತ್ಯ. ಅದೇ ರೀತಿ ಮದುವೆಗೆ ಮುನ್ನವೇ ಯುವತಿಯೊಬ್ಬಳು ತನ್ನ ಪ್ರಿಯಕರನ ತಂದೆಯನ್ನು ಭೇಟಿ ಮಾಡಲು ಹೋದಾಗ ಯಾರೂ ಊಹಿಸದ ಘಟನೆ ಒಂದು ನಡೆಯಿತು. ಅದೇನು ಎಂಬುದನ್ನು ಆ ಯುವತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಕಾಟ್ಲೆಂಡ್‌ನ ಯುವತಿಯೊಬ್ಬಳಿಗೆ ಇಂತಹ ಅನಿರೀಕ್ಷಿತ ಅನುಭವ ಎದುರಾಗಿದೆ.

ಡೇಟಿಂಗ್ ಆ್ಯಪ್ ಮೂಲಕ ಯುವತಿ, ಯುವಕನೊಬ್ಬನನ್ನು ಭೇಟಿಯಾದಳು. ಮೊದಲ ಭೇಟಿಯ ಬಳಿಕ ಆಕೆ, ಆತನ ಪ್ರೀತಿಯ ಬಲೆಯಲ್ಲಿ ಬಿದ್ದಳು. ನಂತರ, ಈ ಸಂಬಂಧವು ತುಂಬಾ ಗಟ್ಟಿಯಾಗಿ, ಇಬ್ಬರೂ ಮದುವೆಯಾಗುವ ಬಗ್ಗೆ ಯೋಚಿಸಿದರು. ಮದುವೆಗೆ ಯುವಕನ ಪಾಲಕರ ಒಪ್ಪಿಗೆ ಪಡೆಯಲೆಂದು ಅವರ ಭೇಟಿಗಾಗಿ ಆಕೆ ಹೋದಾಗ ಒಂದು ದೊಡ್ಡ ಶಾಕ್​ ಕಾದಿತ್ತು.

ಆ ಯುವತಿ ಹತ್ತಿರದ ಬಾರ್‌ ಒಂದರಲ್ಲಿ ವರನ ತಂದೆಯನ್ನು ಭೇಟಿಯಾಗುತ್ತಾಳೆ. ಆಗ ಆಕೆಗೆ ಗೊತ್ತಾಗುವ ಶಾಕಿಂಗ್​ ಸಂಗತಿ ಏನೆಂದರೆ, ತಾನು ಪ್ರೀತಿಸಿದ ಯುವಕನ ತಂದೆಯೇ ಆಕೆಯ ಮಾಜಿ ಗೆಳೆಯ ಎಂಬುದು. ಕಳೆದ ಕ್ರಿಸ್‌ಮಸ್ ಸೀಸನ್​ನಲ್ಲಿ ಆ ಯುವತಿ ವರನ ತಂದೆಯೊಂದಿಗೆ ಡೇಟಿಂಗ್ ಮಾಡಿರುತ್ತಾಳೆ. ಆದರೆ, ಆ ಸಂದರ್ಭದಲ್ಲಿ ಆತನ ಬಗ್ಗೆ ಆಕೆ ಸಂಪೂರ್ಣ ತಿಳಿದಿರುವುದಿಲ್ಲ. ಬಳಿಕ ಬ್ರೇಕಪ್​ ಆಗಿರುತ್ತದೆ. ಆದರೆ, ವಿಧಿ ಇದೀಗ ಇಬ್ಬರನ್ನು ಮತ್ತೊಮ್ಮೆ ಮುಖಾಮುಖಿಯಾಗಿಸಿದೆ.

ಅಂದಹಾಗೆ, ಆ ಯುವತಿ 'ರಿಲೇಟಿವ್ಲಿ ಬ್ಲೋಂಡ್' ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಈ ಘಟನೆಯನ್ನು ಮೆಲಕು ಹಾಕಿದ್ದಾಳೆ. ಈ ಘಟನೆ ಬಳಿಕ ಆ ಯುವತಿ ತುಂಬಾ ಗೊಂದಲಕ್ಕೆ ಒಳಗಾದಳಂತೆ. ಈ ಸಂಬಂಧವನ್ನು ಮುಂದುವರಿಸಬೇಕಾ ಎಂಬ ಪ್ರಶ್ನೆ ಆಕೆಯಲ್ಲಿ ಕಾಡುತ್ತಿದೆಯಂತೆ. ಆ ಯುವಕನನ್ನು ಆಕೆ ತುಂಬಾ ಪ್ರೀತಿಸುತ್ತಿದ್ದರೂ ಆತನ ತಂದೆ ತನ್ನ ಮಾಜಿ ಗೆಳೆಯ ಎಂಬ ವಿಚಾರವನ್ನು ಆಕೆಯಿಂದ ಮರೆಯಲು ಸಾಧ್ಯವಾಗುತ್ತಿಲ್ಲ.

ಇದೀಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾ ವಿಷಯವಾಗಿದ್ದರೂ, ಯುವತಿ ಮುಂದೆ ಏನು ಮಾಡಿದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net