ಕಿಸ್​ ಮಾಡಿ ಕೆಲ್ಸಕ್ಕೆ ಹೋದ ಪತಿ ಮರಳಲೇ ಇಲ್ಲ: ಗಂಡನ ಕರಾಳ ಮುಖ ಬಿಚ್ಚಿಟ್ಟು ಕಣ್ಣೀರಿಟ್ಟ ಮಹಿಳೆ!

Husband
Published on

ಸಂಬಂಧ ಎಂಬುದು ಅದ್ಭುತವಾಗಿರಬಹುದು ಆದರೆ, ಕೆಲವೊಮ್ಮೆ ಅದೇ ಸಂಬಂಧ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಾಂಪತ್ಯದಲ್ಲಿನ ದ್ರೋಹ. ತುಂಬಾ ನಂಬಿ ಮದುವೆಯಾದ ವ್ಯಕ್ತಿ ಬೇರೊಬ್ಬರ ಜತೆ ಸಲುಗೆಯಿಂದ ಇದ್ದಾಗ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.

ಹೀಗೆ ಅನೇಕರು ಹೃದಯ ಬಿರಿಯುವಂತಹ ಅಕ್ರಮ ಸಂಬಂಧಗಳನ್ನು ಕೊಂಡುಕೊಂಡು ತಮಗಾದ ಕಹಿ ಅನುಭವದ ಎಳೆಯನ್ನು ರೆಡ್ಡಿಟ್​ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ರೆಡ್ಡಿಟ್​ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡುವ ವೇದಿಕೆಯೂ ಆಗಿದ್ದು, ಇದರಲ್ಲಿ ಕಂಡು ಬಂದಂತಹ ವಿಚಿತ್ರ ಘಟನೆಯೊಂದು ನಿಮ್ಮ ಹುಬ್ಬೇರಿಸದೇ ಇರದು.

ಮಹಿಳೆಯೊಬ್ಬರು ತಮ್ಮ ಪತಿಯ ಅಕ್ರಮ ಸಂಬಂಧದ ಬಗ್ಗೆ ರೆಡಿಟ್​ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 2018ರ ಜೂನ್​ 1ರಂದು ನನ್ನ ಪತಿ ನನಗೆ ಚುಂಬಿಸಿ ಗುಡ್​ಬೈ ಹೇಳಿ ಕೆಲಸಕ್ಕೆ ಹೋದರು. ಬಳಿಕ ನಾನು ಮನೆಯನ್ನು ಶುಚಿಗೊಳಿಸುತ್ತಿದ್ದೆ. ಈ ವೇಳೆ ಮನೆಯ ಬೆಲ್​ ಶಬ್ಧವಾಯಿತು. ಬಾಗಿಲ ತೆಗೆದಾಗ ಒಬ್ಬ ವ್ಯಕ್ತಿ ನಿಂತಿದ್ದ. ನನ್ನ ಪತಿಯೊಂದಿಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಗಂಡ ಎಂದು ಪರಿಚಯ ಮಾಡಿಕೊಂಡ. ನನ್ನ ಪತ್ನಿಗೂ ನಿಮ್ಮ ಪತಿಗೂ ಅಕ್ರಮ ಸಂಬಂಧ ಇದೆ ಎಂದು ಹೇಳಿದ.

ಆರು ತಿಂಗಳಿಗೂ ಮೊದಲೇ ಅವರಿಬ್ಬರನ್ನು ಹಿಡಿದಿದ್ದೆ ಎಂದ. ಅಕ್ರಮ ಸಂಬಂಧವನ್ನು ಮುಂದುವರಿಸುವುದಿಲ್ಲ ಎಂದು ನನ್ನ ಪತ್ನಿ ಹೇಳಿದ್ದಳು. ಕೊನೆಗಾಣಿಸುತ್ತಾಳೆಂದು ನಾನು ಸಹ ನಂಬಿದ್ದೆ. ಆದರೆ, ಕೆಲ ತಿಂಗಳುಗಳ ಬಳಿಕ ಮತ್ತೆ ಸಂಬಂಧವನ್ನು ಆರಂಭಿಸಿದರು. ಬಳಿಕ ನಿಮ್ಮ ಪತಿಗೆ ಫೋನ್​ ಮಾಡಿ ಇಲ್ಲಿಗೆ ನಿಲ್ಲಿಸಿ, ಇಲ್ಲವಾದಲ್ಲಿ ಎಲ್ಲವನ್ನು ನಿಮ್ಮ ಪತ್ನಿಯ ಮುಂದೆ ಬಯಲು ಮಾಡುತ್ತೇನೆ ಎಂದಿದ್ದೆ. ಆದರೂ, ನಿಮ್ಮ ಪತಿ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ಸಂಬಂಧ ಮುಂದುವರಿಸಿದರು ಎಂದು ಹೇಳಿಕೊಂಡ ಎನ್ನುತ್ತಾಳೆ ಮಹಿಳೆ.

ಆದರೆ, ಶಾಕಿಂಗ್​ ವಿಚಾರವೆಂದರೆ ಅದೇ ಕೊನೆ ನನ್ನ ಪತಿ ಮನೆಗೆ ಮರಳಿ ಬರಲೇ ಇಲ್ಲ. ಈ ನಡುವೆ ವಕೀಲರ ಮೂಲಕ ನನ್ನ ಪತಿ ನನಗೆ 2018ರ ಡಿಸೆಂಬರ್​ 21ರಂದು ಡೈವೋರ್ಸ್​ ನೋಟಿಸ್​ ಕಳುಹಿಸಿದರು. 24 ವರ್ಷಗಳ ನಮ್ಮ ವೈವಾಹಿಕ ಜೀವನಕ್ಕೆ ತೆರೆಬಿತ್ತು. ಇದು ಇಂದಿಗೂ ನನ್ನ ಮನಸ್ಸನ್ನು ಕಾಡುತ್ತಲೇ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net