VIDEO| ಪ್ರಾಣ ಲೆಕ್ಕಿಸದೆ ಹಿಮದ ಕೊಳಕ್ಕೆ ಇಳಿದು ನಾಯಿ ರಕ್ಷಿಸಿದ ಮಹಿಳೆ: ಸಾಮಾಜಿ ಜಾಲತಾಣದಲ್ಲಿ ವಿಡಿಯೋ ವೈರಲ್​

icy pond mar 20
Published on

ನವದೆಹಲಿ: ಹಿಮದಿಂದ ಆವೃತವಾದ ಕೊಳದಲ್ಲಿ ಮುಳುಗುತ್ತಿದ್ದ ನಾಯಿಯನ್ನು ಮಹಿಳೆಯೊಬ್ಬರು ಜೀವ ಲೆಕ್ಕಿಸದೆ ನಾಯಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆಗಿದೆ.

ಕೊಳದ ಮಧ್ಯದಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಯಿಯನ್ನು ನೋಡಿದ ಮಹಿಳೆ ಯಾವುದೇ ಭಯ ಇಲ್ಲದೆ ಧುಮುಕಿ ನಾಯಿಯನ್ನು ರಕ್ಷಿಸಿದರು. ಮಹಿಳೆ ನಾಯಿಯನ್ನು ರಕ್ಷಿಸಿದ 34 ಸೆಕೆಂಡುಗಳ ವಿಡಿಯೋ ತುಣುಕನ್ನು ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಅಪ್​ಲೋಡ್​ ಮಾಡಿದ್ದಾರೆ.

ವಿಡಿಯೋ ತುಣುಕು ಅಪ್​ಲೋಡ್​ ಆಗುತ್ತಲೇ ಅಂದಾಜು ಸಾವಿರ ಲೈಕ್​ಗಳು ಸಿಕ್ಕಿವೆ. ನಾಯಿಯನ್ನು ರಕ್ಷಿಸಿದ ಮಹಿಳೆಯನ್ನು ನೆಟ್ಟಿಗರು ಹೊಗಳಿದ್ದಾರೆ. ಅಲ್ಲದೆ ಈ ವಿಡಿಯೋ ಹಂಚಿಕೊಂಡ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಮರು ಹಂಚಿಕೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net