VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

lion mar 20
Published on

ಗಾಂಧಿನಗರ: ಗ್ರಾಮದ ಬೀದಿಯಲ್ಲಿ ದಿಢೀರ್​ ಸಿಂಹವೊಂದು ಕಾಣಿಸಿಕೊಳ್ಳುವ 7 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲ ಸೃಷ್ಟಿಸಿದೆ.

ಗುಜರಾತ್​ನ ಮಾದವಪುರ ಗ್ರಾಮದಲ್ಲಿ ಸಿಂಹ ಜನರನ್ನು ಅಟ್ಟಿಸಿಕೊಂಡು ಬರುತ್ತಿದೆ. ಸಿಂಹ ಬರುತ್ತಿರುವುದನ್ನು ನೋಡಿದ ಗ್ರಾಮಸ್ಥರು ಭೀತಿಯಿಂದ ಚದುರಿ ಹೋಗುತ್ತಾರೆ. ಈ ವಿಡಿಯೋವನ್ನು ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಎಂಬುವವರು ಅಪ್​ಲೋಡ್​ ಮಾಡಿದ್ದಾರೆ.

ಈ ವಿಡಿಯೋ ಅನ್ನು ಕೆಲವೇ ಕ್ಷಣಗಳಲ್ಲಿ ಅಂದಾಜು 6 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಹಲವು ಪ್ರತಿಕ್ರಿಯೆಗಳು ಕೂಡ ಬಂದಿವೆ.

ಮಾದವಪುರ ಗ್ರಾಮ ಬೀದಿಯಲ್ಲಿ ಸಿಂಹ ಗ್ರಾಮದ ಬೀದಿಯಲ್ಲಿ ಓಡಿ ಬರುತ್ತಿರುತ್ತದೆ. ಈ ವೇಳೆ ಗುಂಪಾಗಿ ನಿಂತಿದ್ದ ಜನರು ದಿಗಿಲುಗೊಂಡು ಓಡಿ ಹೋಗುತ್ತಾರೆ. ಸಿಂಹ ಹಾಗೆ ಬೀದಿಯಲ್ಲಿ ಸಂಚರಿಸಿ ಕಣ್ಮರೆಯಾಗುತ್ತದೆ.
ಈ ವಿಡಿಯೋ ತುಣುಕಿಗೆ ಸುಸಂತಾ ನಂದಾ ಅವರು ಸಿಂಹ ಉಸೈನ್​ ಬೋಲ್ಟ್​ಗಿಂತ ವೇಗವಾಗಿ ಓಡಿ ಬರುತ್ತಿದೆ. ಇದರಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ವಿಡಿಯೋ ವೀಕ್ಷಿಸಿದವರು ಸಿಂಹ ಮುಂದೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ಸಿಂಹ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net