VIDEO: ಗೇಟು ತೆರೆಯಲು ತಡವಾದದ್ದಕ್ಕೆ ಸೆಕ್ಯೂರಿಟಿ ಮೇಲೆ ಮಹಿಳಾ ಪ್ರೊಫೆಸರ್ ಹಲ್ಲೆ- ವಿಡಿಯೋ ವೈರಲ್

WhatsApp Image 2022-09-12 at 4.13.29 PM
Published on

ನೊಯ್ಡಾ: ಮಹಿಳಾ ಪ್ರೊಫೆಸರ್​ ಒಬ್ಬರು ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪ್ರೊ. ಸುತಾಪಾ ದಾಸ್ ಕಾರಿನಿಂದ ಇಳಿದು ಬಂದು, ಸೆಕ್ಯೂರಿಟಿ ಸಿಬ್ಬಂದಿ ಸಚಿನ್​ನ ಕಪಾಳಕ್ಕೆ ಬಾರಿಸಿದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಕಾರು ಬಂದಾಗ ಗೇಟು ತೆರೆಯಲು ಸೆಕ್ಯೂರಿಟಿ ಸಿಬ್ಬಂದಿ ತಡ ಮಾಡಿದ್ದಾರೆ. ಈ ಕಾರಣಕ್ಕಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರೊ. ಸುತಾಪಾ ದಾಸ್ ಸಮರ್ಥಿಸಿಕೊಂಡಿದ್ದಾರೆ.

ಆದರೆ ಸೆಕ್ಯೂರಿಟಿ ಸಿಬ್ಬಂದಿ ಹೇಳುವುದೇ ಬೇರೆ. ಕಾರಿನ ನಂಬರ್ ಕಾಣುತ್ತಿದ್ದಂತೆ ನಮ್ಮಲ್ಲಿ ಸೆನ್ಸರ್ ಮೂಲಕ ಗೇಟು ತೆರೆಯುತ್ತದೆ. ಆದರೆ ಈ ಬಾರಿ ಕಾರಿನ ನಂಬರ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಇದರಿಂದ ಗೇಟ್ ತನ್ನಿಂತಾನೇ ತೆರೆಯಲಿಲ್ಲ. ಈ ವೇಳೆ ನಾವೇ ಗೇಟ್ ತೆರೆದು ಕಾರು ಒಳ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಹೀಗಿದ್ದರೂ ಮಹಿಳೆ ಬಂದು ಥಳಿಸಿದ್ದಾರೆ. ಈ ಸಂದರ್ಭದಲ್ಲಿ ನಾವು ಪೊಲೀಸರಿಗೆ ಕರೆ ಮಾಡಿದ್ದೇವೆ ಎಂದು ಸೆಕ್ಯೂರಿಟಿ ಸಚಿನ್ ತಿಳಿಸಿದ್ದಾರೆ.

ಪ್ರೊಫೆಸರ್ ಹಲ್ಲೆ ಮಾಡುತ್ತಿರುವುದನ್ನು ಇನ್ನೋರ್ವ ಸೆಕ್ಯೂರಿಟಿ ಸಿಬ್ಬಂದಿ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಿಸಿಟಿವಿಯಲ್ಲೂ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಜಾಮೀನು ಲಭಿಸಿದೆ. (ಏಜೆನ್ಸೀಸ್)

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net