ಟೆಂಪೋದೊಳಗೆ ರೇಪ್​... ಬೆಳ್ಳಂಬೆಳಿಗ್ಗೆ ನಡೆದಿತ್ತು ಕ್ರೂರಿಯ ಆರ್ಭಟ!

Rape
Published on

ಮುಂಬೈ: ರಸ್ತೆಬದಿ ನಿಲ್ಲಿಸಿದ್ದ ಟೆಂಪೋದೊಳಗೆ 34 ವರ್ಷ ವಯಸ್ಸಿನ ಮಹಿಳೆಯನ್ನು ರೇಪ್​ ಮಾಡಿ, ಕಬ್ಬಿಣದ ಸಲಾಕೆಯಿಂದ ಹಿಂಸಿಸಿರುವ ಭಯಾನಕ ಘಟನೆ ಮುಂಬೈನಿಂದ ವರದಿಯಾಗಿದೆ. ಕೃತ್ಯದ ಸುಳಿವು ಸಿಕ್ಕ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನ್​ ಚೌಹಾನ್​(45) ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. 

ಶುಕ್ರವಾರ ಬೆಳಗಿನ ಜಾವ, ಮುಂಬೈನ ಸಾಕಿನಾಕ ಸಬ್​ಅರ್ಬನ್​ ಪ್ರದೇಶದಲ್ಲಿ ಈ ಅಪರಾಧ ನಡೆದಿದೆ. ಖೈರಾನಿ ರಸ್ತೆಯ ಬದಿಯಲ್ಲಿ ಮಹಿಳೆಯೊಬ್ಬಳು ಟೆಂಪೋದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದಾಗಿ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಬೆಳ್ಳಂಬೆಳಿಗ್ಗೆ ಕರೆ ಬಂತು. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ತಕ್ಷಣ ರಾಜವಾಡಿ ಆಸ್ಪತ್ರೆಗೆ ಶುಶ್ರೂಷೆಗಾಗಿ ಕರೆದೊಯ್ದರು ಎನ್ನಲಾಗಿದೆ.

ಆರಂಭಿಕ ತನಿಖೆಯಿಂದ ಮಹಿಳೆಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ, ನಂತರ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಖಾಸಗಿ ಅಂಗಗಳಿಗೆ ಮತ್ತು ಇತರೆಡೆ ಗಾಯಗೊಳಿಸಿರುವುದು ತಿಳಿದುಬಂದಿದೆ. ಕೃತ್ಯ ನಡೆದ ವಾಹನದೊಳಗೆಲ್ಲಾ ರಕ್ತದ ಕಲೆಗಳು ಕಂಡುಬಂದಿವೆ.

ತುರ್ತು ಕಾರ್ಯಾಚರಣೆ ಕೈಗೊಂಡ ಪೊಲೀಸರು, ಮೋಹನ್​ ಚೌಹಾನ್​ಅನ್ನು ಕೊಲೆ ಯತ್ನ(ಐಪಿಸಿ ಸೆಕ್ಷನ್​ 307) ಮತ್ತು ರೇಪ್​ (ಸೆಕ್ಷನ್ 376) ಮಾಡಿರುವ ಆರೋಪಗಳಡಿ ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net