More

    ಗಣಪ ಮೂರ್ತಿ ಎತ್ತರ: ಸರ್ಕಾರಿ ಆದೇಶಕ್ಕೆ ಸೆಡ್ಡು ಹೊಡೆದ ವಿಶ್ವ ಹಿಂದೂ ಪರಿಷತ್!

    ಚಿತ್ರದುರ್ಗ: ಚಿತ್ರದುರ್ಗದಲ್ಲಿ 13 ಅಡಿಗೂ ಹೆಚ್ಚು ಎತ್ತರವಿರುವ ಗಣಪತಿಯ ಪ್ರತಿಷ್ಠಾಪನೆಗೆ ವಿಶ್ವ ಹಿಂದೂ ಪರಿಷತ್(ವಿಎಚ್​ಪಿ) ಸಿದ್ಧವಾಗಿದೆ. ತನ್ಮೂಲಕ ಸಾರ್ವಜನಿಕವಾಗಿ 5 ಅಡಿಗಿಂತ ಎತ್ತರವಿರುವ ಗಣಪ ಮೂರ್ತಿ ಪ್ರತಿಷ್ಠಾಪಿಸಬಾರದೆಂಬ ರಾಜ್ಯ ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದಿದೆ.

    ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಪಕ್ಕದಲ್ಲಿ ಸುಮಾರು 13 ಅಡಿ ಎತ್ತರದ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ವಿಎಚ್​ಪಿ​ ಸಿದ್ಧತೆ ನಡೆಸಿದೆ. ಇದು 5 ಅಡಿಗೂ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಿಷೇಧಿಸಿರುವ ಸರ್ಕಾರಿ ಆದೇಶದ ಉಲ್ಲಂಘನೆಯಾಗಲಿದೆ.

    ಇದನ್ನೂ ಓದಿ: ರಾಜ್ಯ ಬಿಜೆಪಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀಗಳು

    ಅಷ್ಟೇ ಅಲ್ಲ, ಸರ್ಕಾರ 5 ದಿನ ಮಾತ್ರ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದರೂ, ಚಿತ್ರದುರ್ಗದಲ್ಲಿ ವಿಎಚ್​ಪಿ,​ 21 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಬೇಕೆಂದು ಬಯಸಿದೆ. ಸರ್ಕಾರವೇ ತನ್ನ ನಿರ್ಧಾರವನ್ನು ಬದಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

    ಸಿಲಿಂಡರ್​ ಸ್ಫೋಟ: ಅಡುಗೆ ಮಾಡ್ತಿದ್ದ ಅಜ್ಜಿಯ ಪ್ರಾಣ ಉಳಿದದ್ದೇ ರೋಚಕ!

    ಹು-ಧಾ ಪಾಲಿಕೆ: ಬಿಜೆಪಿಗೆ ಹೊಸತೊಂದು ವಿಘ್ನ – ಪಕ್ಷದಲ್ಲಿ ಉಪಮೇಯರ್​ ಅಭ್ಯರ್ಥಿಯೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts