ಕೇಶರಾಶಿಯೇ ಉಡುಪಾದಾಗ! ಮಹಿಳೆಯ ಸ್ಟೈಲ್​ಗೆ ಫಿದಾ ಆದ ನೆಟ್ಟಿಗರು

hair
Published on

ಬೆಂಗಳೂರು: ಉದ್ದ ಕೂದಲು ಬಹುತೇಕ ಹೆಣ್ಣು ಮಕ್ಕಳ ಹೆಬ್ಬಯಕೆಯಾದರೂ ಅದರ ನಿರ್ವಹಣೆಯ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಆದರೆ ಅನೇಕರು ಅದೇ ಉದ್ದ ಕೂದಲಿನೊಂದಿಗೆ ಮಾಡುವ ಸ್ಟೈಲ್ ನೋಡಿದರೆ ಇನ್ನೂ ಹಲವರಿಗೆ ಉದ್ದ ಕೂದಲಿನ ಬಗ್ಗೆ ಆಸೆ ಹುಟ್ಟುವುದು ಸುಳ್ಳಲ್ಲ.

ಅದೇ ರೀತಿ ಇನ್​ಸ್ಟಾಗ್ರಾಂನಲ್ಲಿ ಒಬ್ಬ ಮಹಿಳೆ ತನ್ನ ಉದ್ದ ಕೂದಲಿನೊಂದಿಗೆ ಹೊಸ ಸ್ಟೈಲ್ ಮಾಡಿದ್ದಾಳೆ. ಬಟ್ಟೆ ಬದಲು ಕೂದಲನ್ನೇ ಬಟ್ಟೆ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡಿದ್ದಾಳೆ. ಕೂದಲನಿಂದ ಪೂರ್ತಿ ದೇಹವನ್ನು ಮುಚ್ಚಿಕೊಂಡು ಅದಕ್ಕೆ ಬೆಲ್ಟ್​ ಒಂದನ್ನು ತೊಟ್ಟಿದ್ದಾಳೆ. ತಲೆಗೊಂದು ಹ್ಯಾಟ್ ತೊಟ್ಟು, ಸನ್​ಗ್ಲಾಸ್ ಒಂದನ್ನು ಹಾಕಿಕೊಂಡಿದ್ದಾಳೆ. ಉದ್ದನೆಯ ಕೂದಲನೊಂದಿಗೆ ಆಕೆ ಮಾಡಿಕೊಂಡ ಸ್ಟೈಲ್​ಗೆ ನೆಟ್ಟಿಗರು ಫಿದಾ ಆಗಲಾರಂಭಿಸಿದ್ದಾರೆ.

ಈ ರೀತಿ ಕೂದಲ ಬಟ್ಟೆ ತೊಟ್ಟಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಆ ವಿಡಿಯೋವನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮಂತೆ ನನಗೂ ಉದ್ದ ಕೂದಲಿರಬೇಕಿತ್ತು ಎಂದು ಆಸೆಯನ್ನು ಬಿಚ್ಚಿಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net