'ಮಲ್ಗೋಣ ಬಾ ಅಂತ ಕರೀತಾನೆ!' ಸುದೀಪ್ ಎದುರೇ ಮಂಜುನ ನಡವಳಿಕೆ ಖಂಡಿಸಿದ ಚಕ್ರವರ್ತಿ! ಪರ್ಸನಲ್​ ವಿಚಾರವೂ ಬಯಲು

bb
Published on

ಬೆಂಗಳೂರು: ಬಿಗ್​ಬಾಸ್ ಸೀಸನ್​ 8 ಸೆಕೆಂಡ್​ ಇನ್ನಿಂಗ್ಸ್ ಆಗಿ ವೀಕ್ಷಕರ ಮುಂದೆ ಬರುತ್ತಿದೆ. 70ಕ್ಕೂ ಹೆಚ್ಚು ದಿನಗಳ ಕಾಲ ಮನೆಯಲ್ಲಿದ್ದ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿ 43 ದಿನಗಳನ್ನು ಕಳೆದು ಮತ್ತೆ ಮನೆಯೊಳಗೆ ಬಂದು ಆಟ ಆಡಲಾರಂಭಿಸಿದ್ದಾರೆ. ಈಗಾಗಲೇ ಯಾರ್ಯಾರು ತಮ್ಮ ಬಗ್ಗೆ ಏನೇನು ಭಾವನೆ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಅರಿತುಕೊಂಡಿರುವ ಸ್ಪರ್ಧಾಳುಗಳು ಆಟ ಹೆಚ್ಚೇ ಕುತೂಹಲಕಾರಿಯಾಗಿ ಸಾಗಲಾರಂಭಿಸಿದೆ.

ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಾಳುಗಳಿಗೆ ಒಂದು ಪ್ರಶ್ನೆ ಕೇಳುತ್ತಾರೆ. ನಿಮ್ಮ ಮನೆಯಲ್ಲಿ ನಿಮಗೆ ಏನು ಹೇಳಿ ಕಳುಹಿಸಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಮಂಜು ಪಾವಗಡ ಅವರು, ನನಗೆ ಪ್ರಶಾಂತ್ ಮತ್ತು ಚಕ್ರವರ್ತಿ ಇಂದ ದೂರ ಇರು ಎಂದಿದ್ದಾರೆ ಎನ್ನುತ್ತಾರೆ. ಈ ಮಾತಿಗೆ ಸಿಟ್ಟಿಗೆದ್ದ ಚಕ್ರವರ್ತಿ ಚಂದ್ರಚೂಡ್ ಮಂಜು ವಿರುದ್ಧ ತಿರುಗಿ ಬೀಳುತ್ತಾರೆ.

ಮಂಜು ಒಬ್ಬ ಹಳ್ಳಿ ಹುಡುಗ ಎಂದು ಹೇಳಿಕೊಳ್ಳುತ್ತಾನೆ. ಯಾರಾದರೂ ಒಂದು ಶೋಗೋಸ್ಕರ ಒಂದು ಹುಡುಗಿಯನ್ನು ಹೆಂಡತಿ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಪತ್ತರವಳ್ಳಿ ಎಂದು ಬೇಲಿ ಸಂದಿಯ ಕಾಮ ಎಂದರ್ಥ. ಆದರೆ ಇಲ್ಲಿ ಮಂಜು ದಿವ್ಯಾಗೆ ಹಾಗೇ ಕರೆಯುತ್ತಾನೆ, ಸರಸಕೆ ಬಾ ಅಂತಾನೆ, ಮಲ್ಗೋಣ ಬಾ ಅಂತಾನೆ.. ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಮಂಜು ಅವರು, ಅವೆಲ್ಲವೂ ಮಾಡಿದ್ದು ತಮಾಷೆಗೆ. ಮನೆಯೊಳಗೆ ಜತೆಯಲ್ಲಿದ್ದಾಗ ಅವೆಲ್ಲ ತಮಾಷೆಗೆ ತಾವೂ ನಕ್ಕು ಹೊರಗೆ ಹೋದ ಮೇಲೆ ಅದನ್ನೇ ಸೀರಿಯಸ್ ಮಾಡಿದರೆ ಹೇಗೆ? ಪತ್ತರವಳ್ಳಿ ಪದಕ್ಕೆ ಅರ್ಥವಿದೆ ಎನ್ನುವುದೂ ನನಗೆ ಗೊತ್ತಿರಲಿಲ್ಲ. ಅವರು ಹೆಣ್ಣಿಗೆ ಮರ್ಯಾದೆ ಕೊಡ್ತೀನಿ ಅಂತಾರೆ. ಅವರು ಹೆಣ್ಣು ಮಕ್ಕಳ ಜತೆ ಹೇಗಿದ್ದದ್ದಕ್ಕೆ ಇಲ್ಲಿಗೆ ಬಂದಿದ್ದಾರೆ ಎನ್ನುವುದು ನನಗೂ ಗೊತ್ತು ಎಂದು ಹೇಳುತ್ತಾರೆ.

ಈ ವಿಚಾರದಲ್ಲಿ ಮತ್ತೆ ಗರಂ ಆಗುವ ಚಂದ್ರಚೂಡ್, ನಾನು ಇಬ್ಬರಿಗೆ ಡಿವೋರ್ಸ್ ನೀಡಿದ್ದೇನೆ. ಸಂವಿಧಾನದ ಪ್ರಕಾರವೇ ಡಿವೋರ್ಸ್ ನೀಡಿದ್ದೇನೆ. ಆದರೆ ಇವನ ರೀತಿ ಪತ್ತರವಳ್ಳಿ ಆಟ ಆಡಿಲ್ಲ ಎಂದು ಬೈದಾಡುತ್ತಾರೆ. ಆಗ ಮಧ್ಯೆ ಬರುವ ಸುದೀಪ್, ಮಂಜು ಅವರಿಗೆ ನೀವು ನೀಡಿದ ಹೇಳಿಕೆ ತಪ್ಪು ಎಂದು ಮನವರಿಕೆ ಮಾಡಿಸುತ್ತಾರೆ. ಉಳಿದಂತೆ ನಿಮ್ಮ ನಿಮ್ಮ ಅಭಿಪ್ರಾಯಗಳು ನಿಮಗೆ, ಅದು ಸರಿಯೆನಿಸಿದರೆ ಮುಂದುವರಿಸಿ ಇಲ್ಲ ಬದಲಾಯಿಸಿಕೊಳ್ಳಿ ಎಂದು ಬುದ್ಧಿ ಹೇಳಿ ಮಾತುಕತೆ ಮುಂದುವರಿಸುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net