

ಕೆಲವರು ನಾವು ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಬೇಕು, ಮೀಮ್ ಆಗಿ ಎಲ್ಲರ ಗಮನ ಸೆಳೆಯಬೇಕು ಎಂಬ ಹುಚ್ಚು ಪ್ರಯತ್ನಕ್ಕೆ ಇದೀಗ ಮುಂದಾಗಿದ್ದಾರೆ ಅನಿಸುತ್ತೆ. ಅದಕ್ಕೆ ಕಾರಣ ಇತ್ತೀಚೆಗೆ ವೈರಲ್ ಆಗುತ್ತಿರುವ ಹಲವಾರು ವಿಚಿತ್ರ ಬಗೆಯ ವಿಡಿಯೋಗಳು. ಈ ಸಾಲಿಗೆ ಇಲ್ಲೊಬ್ಬರು ಮಹಿಳೆ ಮಾಡಿರುವ ವಿಡಿಯೋ ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ.
ಹಲವರು ವೇಗವಾಗಿ, ಸುಲಭವಾಗಿ ಚಪಾತಿ ಮಾಡಲು ಅನೇಕ ವಿಧಾನಗಳನ್ನು ಬಳಸುತ್ತಾರೆ. ಕೆಲವರು ತವಾ ಬಳಸದೆ ನೇರವಾಗಿ ಒಲೆ ಮೇಲೆ ಇಟ್ಟು ಬೇಯಿಸುತ್ತಾರೆ. ಇನ್ನು ಕೆಲವರು ಬೆಂಕಿಯ ಮೇಲಿಟ್ಟು ಫುಲ್ಕಾ ರೀತಿ ಮಾಡುತ್ತಾರೆ. ಆದರೆ, ಈ ಮಹಿಳೆ ಚಪಾತಿಯನ್ನು ಲಟಿಸಿ, ಅದನ್ನು ಅನ್ನ ಬೇಯಿಸುವ ಪ್ರೆಶರ್ ಕುಕ್ಕರ್ಗೆ ಹಾಕಿದ್ದಾಳೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮೊದಲು ಉಂಡೆ ಮಾಡಿಟ್ಟುಕೊಂಡಿದ್ದ ಗೋದಿ ಹಿಟ್ಟನ್ನು ಲಟಿಸಿ, ಚಪಾತಿಯ ಆಕಾರಕ್ಕೆ ತರುವ ಮಹಿಳೆ, ತದನಂತರ ಅದನ್ನು ಕುಕ್ಕರ್ ಒಳಗೆ ಇಟ್ಟು ವಿಶಿಲ್ ಆಗುವವರೆಗೂ ಕಾದು, ಆನಂತರ ಮುಚ್ಚಳವನ್ನು ತೆರೆಯುತ್ತಾಳೆ. ಆಗ ಚಪಾತಿ ತವಾದಲ್ಲಿ ಬೇಯಿಸಿದಂತೆಯೇ ನಿಮಿಷಗಳಲ್ಲಿ ಬಿಸಿ ಬಿಸಿ ಚಪಾತಿ ತಯಾರಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದು, ಮಹಿಳೆಯ ಐಡಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ,(ಏಜೆನ್ಸೀಸ್).