More

    ಪೋರ್ನ್​ ವೆಬ್​ಸೈಟ್​ನಲ್ಲಿ ತನ್ನದೇ ವಿಡಿಯೋ ನೋಡಿ ಯುವತಿ ಶಾಕ್! ಆರೋಪಿ ಬೇರೆ ಯಾರೂ ಅಲ್ಲ… ಎಐ ದುರ್ಬಳಕೆ

    ಲಂಡನ್​: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಸಹಾಯದಿಂದ ಯುವತಿಯ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸಿ, ಅಶ್ಲೀಲ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ.

    ಇಂಗ್ಲೆಂಡ್ ಮೂಲದ ಯುವತಿಯೊಬ್ಬಳ ಡೀಪ್‌ಫೇಕ್ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಆಕೆಯ ಆಪ್ತ ಸ್ನೇಹಿತನನ್ನೇ ಬಂಧಿಸಲಾಗಿದೆ. ಯುವತಿಯು ಇತ್ತೀಚೆಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.

    ಒಂದು ದಿನ ಪೋರ್ನ್​ ಸೈಟ್‌ಗೆ ಲಿಂಕ್ ಆಗಿರುವ ಮೇಲ್ ಐಡಿಯಿಂದ ನನಗೆ ಇಮೇಲ್ ಬಂದಿತು. ನಾನು ಲಿಂಕ್ ಅನ್ನು ಕ್ಲಿಕ್​ ಮಾಡಿದಾಗ ಒಂದು ಕ್ಷಣ ನಾನೇ ಶಾಕ್​ ಆದೆ. ಏಕೆಂದರೆ, ಆ ಲಿಂಕ್​ನಲ್ಲಿ ನನ್ನದೇ ಮುಖ ಹೋಲುವ ಬಹಳಷ್ಟು ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡಿದೆ. ಅಲ್ಲದೆ, ವಿಡಿಯೋ ನೋಡಿದ ಅನೇಕರು ಸೈಟ್‌ನಲ್ಲಿ ಹೀಗೆ ಹೆಚ್ಚಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವಂತೆ ಕಾಮೆಂಟ್​ ಬಾಕ್ಸ್​ನಲ್ಲಿ ಆಗ್ರಹಿಸಿದ್ದರು. ಅದನ್ನು ನೋಡಿದ ನಂತರ ಏನು ಮಾಡಬೇಕೆಂದು ತೋಚದೆ, ಕಿರುಚಾಡಿ ಕಣ್ಣೀರಿಟ್ಟೆ ಎಂದು ಯುವತಿ ಬಿಬಿಸಿಗೆ ತಿಳಿಸಿದ್ದಾಳೆ.

    ನಾನು ಬಾಲ್ಯದಿಂದಲೂ ಅನೇಕ ಸೈಬರ್ ದಾಳಿಗಳನ್ನು ಎದುರಿಸಿದ್ದೇನೆ. ಡೇಟಿಂಗ್ ಆ್ಯಪ್‌ಗಳಲ್ಲಿ ಕೆಲವರು ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕೋವಿಡ್ ಅವಧಿಯಲ್ಲಿ ನಾನು ಲೈಂಗಿಕ ಕಾರ್ಯಕರ್ತೆ ಎಂದು ಕೆಲವರು ಎಕ್ಸ್ ಮೂಲಕ ಪೋಸ್ಟ್ ಹಂಚಿಕೊಂಡಿದ್ದರು ಎಂದು ಯುವತಿ ತುಂಬಾ ನೋವಿನಿಂದ ಈ ಮಾತನ್ನು ಹೇಳಿಕೊಂಡಿದ್ದಾಳೆ.

    ತಾನು ಎದುರಿಸಿದ ಸೈಬರ್ ದಾಳಿಯ ಹಿಂದೆ ಮಾಜಿ ಗೆಳೆಯನ ಕೈವಾಡವಿದೆ ಎಂದು ಶಂಕಿಸಲಾಗಿದೆ. ಅಶ್ಲೀಲ ವೆಬ್​ಸೈಟ್‌ನಲ್ಲಿರುವ ಫೋಟೋಗಳಿಂದ ಶಂಕಿತನನ್ನು ಗುರುತಿಸಲು ಸುಳಿವು ಸಿಕ್ಕಿತು. ಕೇಂಬ್ರಿಡ್ಜ್‌ನ ಕಾಲೇಜೊಂದರಲ್ಲಿ ಆತ್ಮೀಯ ಗೆಳೆಯ ಅಲೆಕ್ಸ್‌ನೊಂದಿಗೆ ತೆಗೆದ ಚಿತ್ರ ಅದು. ಎಐ ಬಳಸಿ ಪೋರ್ನ್ ಮಾಡಿರುವುದು ಪತ್ತೆಯಾಗಿದೆ. ಬಳಿಕ ಸ್ನೇಹಿತನನ್ನು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ ಎಂದು ಸಂತ್ರಸ್ತೆ ಸ್ಪಷ್ಟಪಡಿಸಿದ್ದಾಳೆ.

    ಪೊಲೀಸರು ನಡೆಸಿದ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ಈತ ತನಗನ ಸ್ನೇಹಿತೆಯನ್ನು ಮಾತ್ರವಲ್ಲದೆ, ಇತರೆ 15 ಮಹಿಳೆಯರ ಚಿತ್ರಗಳನ್ನು ಪೋರ್ನ್ ಸೈಟ್‌ಗಳಲ್ಲಿ ಪ್ರಸಾರ ಮಾಡಿರುವುದು ಪತ್ತೆಯಾಗಿದೆ. ಸದ್ಯ ಅಲೆಕ್ಸ್​ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts