ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು

Tender Coconut

ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ ಶಾಖವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಸೂರ್ಯ ನಮ್ಮ ನೆತ್ತಿಯನ್ನು ಸುಡುತ್ತಿದ್ದಾನೆ. ಇದರಿಂದ ಜನರಿಗೆ ಸಿಕ್ಕಾಪಟ್ಟೆ ದಾಹವಾಗುತ್ತಿದ್ದು, ದೇಹವನ್ನು ತಂಪಾಗಿರಿಸಲು ಕೋಲ್ಡ್​ ವಾಟರ್​ ಮತ್ತು ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ಆದರೆ, ಬೇಸಿಗೆಯಲ್ಲಿ ಎಳನೀರಿಗಿಂತ ಉತ್ತಮವಾದ ಪಾನೀಯವಿಲ್ಲ ಮತ್ತು ಇದನ್ನು ಇಷ್ಟಪಡದವರೇ ಇಲ್ಲ.

blank

ಎಳನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ತೂಕ ನಿಯಂತ್ರಣ ಹಾಗೂ ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ, ಎಳನೀರನ್ನು ಅತಿಯಾಗಿ ಸೇವಿಸಿದರೆ ಹಲವಾರು ಆರೋಗ್ಯ ನಷ್ಟಗಳನ್ನು ಸಹ ಎದುರಿಸಬೇಕಾಗುತ್ತದೆ. ಈ ತೆಂಗಿನ ನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅತಿಯಾಗಿ ಕುಡಿಯುವುದರಿಂದ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ಕೆಲವರಂತೂ ಈ ಎಳನೀರು ಕುಡಿಯಲೇಬಾರದು.

ಪಾರ್ಶ್ವವಾಯು
ಎಳನೀರು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ತೆಂಗಿನ ನೀರನ್ನು ಮಿತವಾಗಿ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು. ಆದರೆ, ಇದನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿ ಪಾರ್ಶ್ವವಾಯು ಬರುವ ಸಾಧ್ಯತೆ ಇರುತ್ತದೆ.

ಅತಿಸಾರ
ಎಳನೀರು ಮೊನೊಸ್ಯಾಚರೈಡ್ಸ್​, ಆಲಿಗೋಸ್ಯಾಚರೈಡ್ಸ್​ ಮತ್ತು ಪಾಲಿಯೋಲ್‌ಗಳನ್ನು ಹೊಂದಿರುತ್ತದೆ. ಇವು ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್‌ಗಳಾಗಿವೆ. ದೇಹದಲ್ಲಿ ಈ ಅಂಶಗಳ ಪ್ರಮಾಣ ಹೆಚ್ಚಾದರೆ ಅವು ದೇಹದಿಂದ ನೀರನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಅತಿಸಾರ, ವಾಂತಿ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ತೆಂಗಿನ ನೀರನ್ನು ಪ್ರತಿದಿನ ಕುಡಿಯುವುದನ್ನು ನಿಲ್ಲಿಸಿ ಮತ್ತು ಸಾಂದರ್ಭಿಕವಾಗಿ ಮಾತ್ರ ಸೇವಿಸಿ.

ಬಿಪಿ ಕಡಿಮೆಯಾಗಬಹುದು
ಎಳನೀರಿನಲ್ಲಿ ಹೆಚ್ಚಿನ ಪೊಟ್ಯಾಸಿಯಂ ಅಂಶ ಇರುವ ಕಾರಣ, ಇದನ್ನು ಹೆಚ್ಚು ಕುಡಿಯುವುದರಿಂದ ಬಿಪಿ ಕಡಿಮೆಯಾಗುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗಬಹುದು.

ಯಾರು ಕುಡಿಯಬಾರದು?
ಮಧುಮೇಹ ಇರುವವರು ಹೆಚ್ಚು ತೆಂಗಿನ ನೀರನ್ನು ಕುಡಿಯಬಾರದು. ಇದು ಸಕ್ಕರೆ ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಿಂದಾಗಿ ದೇಹದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದು ಕೃತಕ ಸಿಹಿ ಸಂಯುಕ್ತಗಳನ್ನು ಹೊಂದಿರದಿದ್ದರೂ, ತೆಂಗಿನ ನೀರಿನಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್​ಗಳು ಇವೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದು ಸಮಸ್ಯೆಯಾಗಬಹುದು. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ ಎಳನೀರನ್ನು ಮಿತವಾಗಿ ಸೇವಿಸಬೇಕು. ಹಾಗೆಯೇ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧಗಳನ್ನು ಸೇವಿಸುತ್ತಿದ್ದರೆ ಆದಷ್ಟು ತೆಂಗಿನ ನೀರನ್ನು ತಪ್ಪಿಸುವುದು ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಎಳನೀರನ್ನು ಕುಡಿಯಲು ಬಯಸಿದ್ದಲ್ಲಿ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಗಮನಿಸಿ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ನಿಮ್ಮ ವೈಯಕ್ತಿಕ ಆರೋಗ್ಯ ವೃತ್ತಿಪರರ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸುವುದು ಉತ್ತಮ. (ಏಜೆನ್ಸೀಸ್​)

ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್​ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!

ಹೆಣ್ಮಕ್ಕಳಿಗೆ ಸಿಗುವ 2000 ರೂ. ಪುರಷರಿಗಿಲ್ಲ! ಯಾಕೆ ಕೊಡ್ತಿಲ್ಲ ಗೊತ್ತಾ? ಕಾರಣ ಬಿಚ್ಚಿಟ್ಟ ಸಂಯುಕ್ತಾ ಪಾಟೀಲ್​

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank