More

    ತೆಗೆದುಕೊಂಡ ಹಣಕ್ಕಾದ್ರೂ ನ್ಯಾಯ ಒದಗಿಸಿ: ಆರ್​ಸಿಬಿಯ ಈ ಆಟಗಾರರ ವಿರುದ್ಧ ಗುಡುಗಿದ ವೀರೂ!

    ಜೈಪುರ: ಐಪಿಎಲ್​​ ಸೀಸನ್​ಗಳು ಬದಲಾಗುತ್ತಿವೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಕತೆ ಮಾತ್ರ ಬದಲಾಗುತ್ತಿಲ್ಲ. ಇದುವರೆಗೂ 16 ಸೀಸನ್​ ಮುಗಿದಿದ್ದರೂ ತಂಡದ ಪ್ರದರ್ಶನ ಮಾತ್ರ ಇನ್ನೂ ಬದಲಾಗಿಲ್ಲ. ಎಂದಿನಂತೆಯೇ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಡುವುದನ್ನು ಮತ್ತು ಇತರ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ನೀಡುತ್ತಿರುವುದನ್ನು ನಾವು ಸಾಕ್ಷಿಯಾಗಿದ್ದೇವೆ.

    ಪ್ರಸಕ್ತ 17ನೇ ಸೀಸನ್​ನಲ್ಲಿಯೂ ಆರ್‌ಸಿಬಿ ತನ್ನ ಸಂಪ್ರದಾಯವನ್ನು ಮುಂದುವರಿಸುತ್ತಿದೆ. 5 ಪಂದ್ಯಗಳಲ್ಲಿ ಕೇವಲ ಒಂದು ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಟೀಮ್​ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಆರ್​ಸಿಬಿ ತಂಡದ ಕೆಲ ಆಟಗಾರರ ಬಗ್ಗೆ ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    ಈ ಸೀಸನ್​ನಲ್ಲಿ ಆರ್​ಸಿಬಿ ಮತ್ತೊಂದು ಸೋಲನ್ನು ಎದುರಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ 6 ವಿಕೆಟ್‌ಗಳಿಂದ ಸೋತಿತು. ವಿರಾಟ್ ಕೊಹ್ಲಿ ಶತಕ ಬಾರಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವೀರೇಂದ್ರ ಸೆಹ್ವಾಗ್ ಆರ್​ಸಿಬಿಯ ಸಿವಿದೇಶಿ ಬ್ಯಾಟ್ಸ್​ಮನ್​ಗಳನ್ನು ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮಾಡಿದ್ದಾರೆ. ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ, ಆ ಹಣಕ್ಕಾದರೂ ನ್ಯಾಯ ಒದಗಿಸಿ ಎಂದು ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

    ಆರ್​ಸಿಬಿ ವೈಫಲ್ಯದ ಬಗ್ಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದೇನೆಂದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದರು. ಆದರೆ ಅವರಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರಂತಹ ಆಟಗಾರರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಮೇಲಾಗಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಬಂದಿಲ್ಲ. ಮಹಿಪಾಲ್ ಲಮ್ರೋರ್​ ತಂಡದಲ್ಲಿ ಇರಲಿಲ್ಲ. ಇದರಿಂದ ಆರ್‌ಸಿಬಿ ಕೊನೆಯಲ್ಲಿ ಮುಗ್ಗರಿಸಿತು. ಆದರೆ, ಮ್ಯಾಕ್ಸ್‌ವೆಲ್ ಮತ್ತು ಗ್ರೀನ್‌ನಂತಹ ಆಟಗಾರರು ತಮಗೆ ಸಿಗುತ್ತಿರುವ ಹಣಕ್ಕೆ ನ್ಯಾಯ ಸಲ್ಲಿಸಬೇಕು. ಅವರು ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಈ ಪಂದ್ಯದಲ್ಲಿ ಆರ್‌ಸಿಬಿ ಇನ್ನೂ 20 ರನ್ ಗಳಿಸಬೇಕಾಗಿತ್ತು. ಕೊಹ್ಲಿ ಕೂಡ ಸ್ಟ್ರೈಕ್ ರೇಟ್ ಹೆಚ್ಚಿಸಬಹುದಿತ್ತು. ಆದರೆ ಇತರ ಬ್ಯಾಟ್ಸ್‌ಮನ್‌ಗಳ ಸಹಕಾರದ ಕೊರತೆಯಿಂದಾಗಿ ಕೊಹ್ಲಿ ಅವರು ಸ್ವಲ್ಪ ಒತ್ತಡದಲ್ಲಿ ನಿಧಾನವಾಗಿ ಬ್ಯಾಟ್ ಮಾಡಿದರು ಎಂದು ವೀರು ಭಾಯ್ ಹೇಳಿದರು.

    ಈ ಪಂದ್ಯದಲ್ಲಿ ವಿರಾಟ್ ಅವರ ನಿಧಾನಗತಿಯ ಬ್ಯಾಟಿಂಗ್​ ಅನ್ನು ಸ್ವಾರ್ಥಿ ಎಂದು ಟೀಕಿಸಲಾಗಿದೆ. ಆದರೆ, ಸೆಹ್ವಾಗ್ ಕೊಹ್ಲಿ ಬ್ಯಾಟ್​ ಬೀಸಿ, ವಿದೇಶಿ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಹ್ವಾಗ್​ ಅವರ ಕಾಮೆಂಟ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    ಕೊಹ್ಲಿ ಕುರಿತು ಅಪಹಾಸ್ಯ ಮಾಡಲು ಹೋಗಿ ಟೀಕೆಗೆ ಗುರಿಯಾದ ಪಾಕ್ ಕ್ರಿಕಟಿಗ

    ಆರ್‌ಸಿಬಿ ಸೋಲಿನ ನಡುವೆಯೂ ಹಲವು ದಾಖಲೆ ಬರೆದ ವಿರಾಟ ಕೊಹ್ಲಿ: ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts