ತಾನು ಗೊತ್ತುಪಡಿಸಿದ ಯುವಕನೊಂದಿಗೆ ಮದುವೆಗೆ ಒಪ್ಪದ ಮಗಳನ್ನೇ ಹತ್ಯೆಗೈದ ತಾಯಿ

Mother Daughter
Published on

ಚೆನ್ನೈ: ತಾನು ನೋಡಿದ ಯುವಕನನ್ನು ಮದುವೆಯಾಗಲು ಒಪ್ಪದ ಮಗಳನ್ನು ತಾಯಿಯೊಬ್ಬಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಿನ್ನೆ (ನ.23) ನಡೆದಿದೆ.

ಪಿ. ಅರುಣಾ (19) ಕೊಲೆಯಾದ ಯುವತಿ. ಈಕೆ ಪಿಚೈ ಮತ್ತು ಆರುಮುಗ ಖಣಿ ದಂಪತಿಯ ಪುತ್ರಿ. ಮಗಳನ್ನು ಕೊಲೆ ಮಾಡಿದ ಬಳಿಕ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೃತ ಅರುಣಾಳ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್​ ಓದುತ್ತಿದ್ದಳು. ಆರು ತಿಂಗಳ ಹಿಂದೆ ಮನೆಗೆ ಮರಳಿದ್ದಳು. ಈ ವೇಳೆ ಕುಟುಂಬ ಅರುಣಾಗೆ ವರನನ್ನು ನೋಡಿದ್ದರು. ಆಕೆಯ ತಾಯಿಯೇ ವರನನ್ನು ಗೊತ್ತುಪಡಿಸಿದ್ದರು. ಆದರೆ, ಮದುವೆ ಆಗಲು ಅರುಣಾ ವಿರೋಧಿಸಿದ್ದಳು.

ಮದುವೆಗೆ ವಿರೋಧಿಸಿದ ಬಳಿಕ ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ತಾಯಿ, ಮಗಳ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇದಾದ ಬಳಿ ತಾನೂ ವಿಷಕಾರಿ ಪೌಡರ್​ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸ್ಥಳೀಯರು ಆಕೆಯನ್ನು ತಡೆದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net