More

    ಒಟಿಟಿಯಲ್ಲಿ ಬದಲಾದ ‘ವರಾಹ ರೂಪಂ…’ ಹಾಡಿನ ಟ್ಯೂನ್; ಕೇಳುಗರಿಂದ ಮಿಶ್ರ ಪ್ರತಿಕ್ರಿಯೆ!

    ಬೆಂಗಳೂರು: ಕಾಂತಾರ ಸಿನಿಮಾ ಬಿಡುಗಡೆಯಾಗಿ ವಿಶ್ವದಾದ್ಯಂತ ಅದ್ಭುತ ಗೆಲುವು ಸಾಧಿಸುತ್ತಿದ್ದಂತೆ ವಿವಾದವೊಂದನ್ನು ಎದುರಿಸಬೇಕಾಗಿ ಬಂದಿತ್ತು. ಚಿತ್ರದಲ್ಲಿ ಬಳಕೆಯಾಗಿದ್ದ ವರಾಹ ರೂಪಂ… ಹಾಡನ್ನು ಅನುಮತಿ ಇಲ್ಲದೆ ಬಳಕೆ ಮಾಡಿದೆ ಎಂದು ಥಾಯ್ಕುಡಂ ಬ್ರಿಡ್ಜ್​​ ಆರೋಪಿಸಿ, ಕೋರ್ಟ್ ಮೆಟ್ಟಿಲೇರಿತ್ತು.

    ‘ಕಾಂತಾರ’ ಚಿತ್ರದಲ್ಲಿರುವ ‘ವರಾಹ ರೂಪಂ’ ಹಾಡನ್ನು ‘ನವರಸಂ’ ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್​ ಥಾಯ್ಕುಡಂ ಬ್ರಿಡ್ಜ್​ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್​ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್, ಕೋರ್ಟ್​ಗೆ ಮನವಿ ಮಾಡಿತ್ತು.

    ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್​ ‘ವರಾಹ ರೂಪಂ …’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ …’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು.

    ತೀರ್ಪನ್ನು ಪ್ರಶ್ನಿಸಿ ‘ಹೊಂಬಾಳೆ ಫಿಲ್ಮ್ಸ್’ ಕೇರಳ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇದನ್ನು ಹೈಕೋರ್ಟ್ ರದ್ದು ಮಾಡಿ ಆದೇಶ ನೀಡಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆಯಾದ ಕಾರಣ ಹಾಡಿನ ಟ್ಯೂನ್ ಬದಲಿಸಲಾಗಿದೆ.

    ಇದೀಗ ಕಾಂತಾರ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್​ನಲ್ಲಿ ವರಾಹ ರೂಪಂ… ಹಾಡಿನ ಟೋನ್​ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಇದನ್ನು ಕೇಳಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸ್ತಿದ್ದಾರೆ. ಅಲ್ಲದೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ತನ್ನದಲ್ಲದ ಕೆಲಸವನ್ನ ತಾನೇ ಮಾಡಿದ್ದು ಎಂದು ಹೇಳಿಕೊಳ್ಳುವುದರಲ್ಲಿ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts