More

    ಕೋವಿ ಪರವಾನಗಿ ಐದು ನಿರ್ಣಯಗಳು : ರೈತರ ಸಭೆಯಲ್ಲಿ ಸಮಾಲೋಚನೆ

    ಸುಳ್ಯ: ಕೋವಿ ಪರವಾನಗಿ ಹೊಂದಿದ ರೈತ ಸದಸ್ಯರ ಸಭೆ ಸೋಮವಾರ ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೋವಿ ಪರವಾನಗಿದಾರರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಸಂಗ್ರಹವಾದ ಅಭಿಪ್ರಾಯಗಳಿಂದ ಐದು ನಿರ್ಣಯ ಕೈಗೊಳ್ಳಲಾಯಿತು.

    ಮುಂದೆ ನಡೆಯುವ ಯಾವುದೇ ಚುನಾವಣಾ ಸಂದರ್ಭ ಬೆಳೆ ಸಂರಕ್ಷಣೆಗಾಗಿ ಪರವಾನಗಿ ಹೊಂದಿದ ಕೃಷಿಕರ ಬಂದೂಕುಗಳನ್ನು ಠಾಣೆಯಲ್ಲಿಡುವುದರಿಂದ ವಿನಾಯಿತಿಗಾಗಿ ನ್ಯಾಯಾಲಯದಲ್ಲಿ ಹೂಡಿರುವ ದಾವೆ ಮುಂದುವರಿಸುವುದು, ಕೋವಿ ಪರವಾನಗಿ ನವೀಕರಣ ಸಮಯದಲ್ಲಿ ಮಾತ್ರ ಠಾಣೆಗೆ ಹಾಜರುಪಡಿಸುತ್ತೇವೆಂದು ಸಂಬಂಧಪಟ್ಟವರನ್ನು ಒತ್ತಾಯಿಸುವುದು, ಪ್ರತಿ ವರ್ಷ ನೀಡಲಿರುವ ಬಂದೂಕುಗಳ ಪರವಾನಗಿ ತಪಾಸಣೆಯನ್ನು ಆಯಾ ಗ್ರಾಮಗಳಲ್ಲಿ ಪೊಲೀಸರು ಮಾಡಲು ವ್ಯವಸ್ಥೆ ಕಲ್ಪಿಸುವುದು, ಬಂದೂಕು ಪರವಾನಗಿದಾರರು ಮೃತರಾದ ಸಂದರ್ಭ ಪರವಾನಗಿಯನ್ನು ವಾರೀಸುದಾರರಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ಈ ಹಿಂದಿನಂತೆ ಸರಳೀಕರಣಗೊಳಿಸುವುದು ಹಾಗೂ ಪ್ರತಿ ಗ್ರಾಮದ ಬಂದೂಕು ಪರವಾನಗಿ ಹೊಂದಿರುವ ಪ್ರತಿಯೊಬ್ಬ ಕೃಷಿಕರನ್ನು ಸಂಪರ್ಕಿಸಿ ಗುಂಪಿಗೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ವಕೀಲ ಯಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ, ವಿಶ್ವನಾಥ ರಾವ್, ಶಂಭಯ್ಯ ಪಾರೆ, ಜಗದೀಶ ಕುಯಿಂತೋಡು, ವಕೀಲ ಪ್ರದೀಪ ಕೊಲ್ಲಮೊಗ್ರ, ದಾಮೋದರ ನಾರ್ಕೋಡು, ಅಶೋಕ್ ಚೂಂತಾರ್, ಮಾಧವ ಗೌಡ ಮಡಪ್ಪಾಡಿ, ಬಾಲಗೋಪಾಲ ಸೇರ್ಕಜೆ, ದಿವಾಕರ ಪೈ ಮಜಿಗುಂಡಿ ಮತ್ತಿತರ ಕೋವಿ ಪರವಾನಗಿದಾರರು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts