ಬೆಂಗಳೂರು ಅಪಾರ್ಟ್‌ಮೆಂಟ್​ನಲ್ಲಿ ಮಹಿಳೆ ಕೊಲೆ.. ಹತ್ಯೆ​ ಬಳಿಕ 2 ದಿನ ಶವದ ಜತೆಗೇ ಇದ್ದ ಭೂಪ!| Murder

Murder (2) (1)
Published on

ಬೆಂಗಳೂರು: ಇಲ್ಲಿನ ಇಂದಿರಾನಗರ ಪ್ರದೇಶದ ಸರ್ವಿಸ್ ಅಪಾರ್ಟ್‌ಮೆಂಟ್​ವೊಂದರಲ್ಲಿ ಅಸ್ಸಾಂನ ಮಾಯಾ ಗೊಗೊಯ್(ಮಹಿಳೆ) ಎಂಬವವರನ್ನು ಇದೇ ನ.24ರಂದು ಕೊಲೆ(Murder)

ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

23 ವರ್ಷದ ಆರವ್ ಹರ್ನಿ ಎಂಬಾತ ನ.23 ರಂದು ಅಪಾರ್ಟ್ಮೆಂಟ್​ಗೆ ಬಂದು ಆಕೆ ಜತೆಯಲ್ಲೇ ಇದ್ದಾನೆ. ಯಾವುದೊ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಮಾಯಾಳ ಎದೆಗೆ ಹಲವು ಬಾರಿ ಇರಿದು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಇಂದು(ಮಂಗಳವಾರ) ಬೆಳಗಿನ ಜಾವದವರೆಗೂ ಆತ ಶವದೊಂದಿಗೆ ಸೂಟ್ ರೂಮ್‌ಗಳಲ್ಲಿಯೇ ಇದ್ದು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಯಾ ಕೊರಮಂಗಲದಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ಮಾಹಿತಿಯನ್ನು ಕಲೆ ಹಾಕುತ್ತಿದ್ದವೆ. ಇನ್ನು ಆರೋಪಿ ಕೇರಳ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಈತನ ಪತ್ತೆಗೆ ಬಲೆ ಬೀಸಲಾಗಿದೆ. ಅವನ ವಶ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಡಿ.ದೇವರಾಜು ಹೇಳಿದ್ದಾರೆ.(ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ).​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net