ನಿರ್ದೇಶಕ ರಾಮಗೋಪಾಲ್​ ವರ್ಮಾ ವಿರುದ್ಧ ನೋಟಿಸ್​ ಜಾರಿ; ಪೊಲೀಸರ ಹುಡುಕಾಟ | Ram Gopal Varma

Ram Gopal Varma
Published on

ಆಂಧ್ರಪ್ರದೇಶ: ಸಿಎಂ ಚಂದ್ರಬಾಬು ನಾಯ್ಡು ಮತ್ತು ಪಕ್ಷದ ಇತರ ನಾಯಕರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಹಾಕಿದರೆಂಬ ಆರೋಪದ ಮೇಲೆ ಇದೇ ನ.11 ರಂದು ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ(Ram Gopal Varma) ವಿರುದ್ಧ ಕೇಸ್​ ದಾಖಲಾಗಿತ್ತು. ಈ ಹಿನ್ನೆಲೆ ನ.24 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗದೆ ಕಳೆದ ಎರಡು ದಿನಗಳಿದ ನಿರ್ದೇಶಕ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ನಿರ್ದೇಶಕ ವರ್ಮಾಗೆ ಈಗಾಗಲೇ ಪೊಲೀಸರು ಎರಡು ಬಾರಿ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೆ, ಇದೇ ನ.24 ರಂದು ಖುದ್ದು ಹಾಜರಾಗಿ ಇಲ್ಲವಾದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ, ವರ್ಮಾ ಮಾತ್ರ ಇದುವರೆಗೂ ನೋಟಿಸ್​ಗೆ ಉತ್ತರ ನೀಡಿಲ್ಲ. ಎಲ್ಲಿ ಇದ್ದೇನೆ ಎಂದು ಸೂಕ್ತ ಮಾಹಿತಿ ಕೂಡ ನೀಡಿಲ್ಲ. ಹೀಗಾಗಿ, ಅವರ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ನೇಮಿಸಿದ್ದು, ಆಂಧ್ರದಲ್ಲಿ ಎರಡು ಮತ್ತು ತಮಿಳುನಾಡಿನಲ್ಲಿ ಒಂದು ತಂಡಗಳನ್ನು ನಿಯೋಜಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಂಡ ಚೈನ್ನೈಗೆ ತೆರಳಿದೆ. ಉಳಿದ ತಂಡಗಳು ಹೈದರಾಬಾದ್​ನ ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಮತ್ತೊಂದು ತಂಡ ಫಿಲ್ಮ್​ನಗರ ಸೇರೆದಂತೆ ವರ್ಮಾ ಅವರ ದಿನನಿತ್ಯದ ಓಡಾಡುವ ಸ್ಥಳಗಳನ್ನು ಪರಿಶೀಲನೆಗೆ ಮುಂದಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ರಾಮಗೋಪಾಲ್​ ವರ್ಮಾ ಪರ ವಕೀಲರ ವಾದ?

ಇದು ಡಿಜಿಟಲ್​ ಯುಗ, ವರ್ಮಾ ಅವರು ತನಿಖೆಗೆ ಠಾಣೆಗೆ ಹಾಜರಾಗಬೇಕೆಂದನಿಲ್ಲ, ಅವರು ಡಿಜಿಟಲ್​ ಮೂಲಕ ತನಿಖೆ ಎದುರಿಸಬಹುದು. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ರಾಮಗೋಪಾಲ್​ ವರ್ಮಾ ತಪ್ಪೇನು ಮಾಡಿಲ್ಲ. ಇದು ದೇಶ ದ್ರೋಹ ಅಥವಾ ಮಾಫಿಯಾ ಅಲ್ಲ. ನಾವು ಕಾನೂನು ನಿಯಮಗಳನ್ನು ಅನುಸರಿಸುತ್ತವೆ. ವರ್ಮಾ ಅವರ ಪ್ರತಿಕ್ರಿಯೆ ಅನ್ನು ವಾಟ್ಸ್ಆ್ಯಪ್​ ಮೂಲಕ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದೇವೆ. ಆದರೆ, ಪೊಲೀಸರು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net