

ದೌಸಾ: ವಿವಾಹಿತ ಮಹಿಳೆ ಮೇಲೆ ಪೊಲೀಸ್ ಕಾನ್ಸ್ಟೆಬಲ್ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಕಾನ್ಸ್ಟೇಬಲ್ನನ್ನು ಮಹೇಶ್ ಗುರ್ಜರ್ ಎಂದು ಗುರುತಿಸಲಾಗಿದ್ದು, ದೌಸಾದ ಸಿಕಂದ್ರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲ್ಪಟ್ಟಿದ್ದಾನೆ. ಮಂಗಳವಾರ ರಾತ್ರಿ ಸುಮಾರು 1:30ರ ಸಮಯದಲ್ಲಿ ಈತ ವಿವಾಹಿತ ಮಹಿಳೆಯ ಮನೆಗೆ ನುಗ್ಗಿದ್ದು, ಈ ಸಂದರ್ಭದಲ್ಲಿ ಆಕೆಯ ಅತ್ತೆ ಮತ್ತು ಪತಿ ಹುಟ್ಟುಹಬ್ಬದ ಪಾರ್ಟಿಗೆಂದು ಹೊರಗಡೆ ಹೋಗಿದ್ದರು. ಹೀಗಾಗಿ ಮನೆಯಮಂಚದ ಮೇಲೆ ಒಬ್ಬಳೇ ಮಲಗಿದ್ದಳು.
ಇದನ್ನೂ ಓದಿ: ಕುಂಬಳಕಾಯಿ ತಿಂದು ಒಂದೇ ಕುಟುಂಬ 9 ಜನ ಅಸ್ವಸ್ಥ: ಮೂರು ಮಕ್ಕಳ ಸಾವು
ಈ ವೇಳೆ ಹತ್ತಿರ ಮಲಗಿದಾಗ ಆಕೆಗೆ ಎಚ್ಚರವಾಗಿದ್ದು, ಅಪರಿಚಿತ ವ್ಯಕ್ತಿಯನ್ನು ನೋಡಿ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಕೂಡಲೇ ಆರೋಪಿಯು ಆಕೆಯ ಬಾಯಿ ಮುಚ್ಚಿದ್ದು, ತಾನೊಬ್ಬ ಪೊಲೀಸ್ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಒಂದು ವೇಳೆ ಗಲಾಟೆ ಮಾಡಿದರೆ ಗುಂಡು ಹಾರಿಸುವುದಾಗಿ ಆಕೆಗೆ ಬೆದರಿಕೆ ಹಾಕಿದ್ದಾನೆ.
ಇದಾದ ಬಳಿಕ ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಅಷ್ಟರಲ್ಲಿ ಮಹಿಳೆಯ ಧ್ವನಿ ಕೇಳಿ ಅಕ್ಕಪಕ್ಕದವರು ಬಂದು ಆರೋಪಿಯನ್ನು ಹಿಡಿದಿದ್ದಾರೆ. ಇದಾದ ಬಳಿಕ ಸಂತ್ರಸ್ತೆಯ ಪತಿ ಹಾಗೂ ಅತ್ತೆಗೆ ಮಾಹಿತಿ ನೀಡಿ ಕರೆಯಿಸಲಾಗಿದ್ದು, ಈ ವೇಳೆ ಸಿಕ್ಕಿಬಿದ್ದ ಆರೋಪಿ ಕಾನ್ಸ್ಟೆಬಲ್ಗೆ ಜನರು ಮಂಚಕ್ಕೆ ಕಟ್ಟಿಹಾಕಿ ತೀವ್ರವಾಗಿ ಥಳಿಸಿದ್ದಾರೆ. ಕೆಲ ಸಮಯದ ನಂತರ ಮಾಹಿತಿ ತಿಳಿದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಕಾನ್ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)