ಕುಂಬಳಕಾಯಿ ತಿಂದು ಒಂದೇ ಕುಟುಂಬ 9 ಜನ ಅಸ್ವಸ್ಥ: ಮೂರು ಮಕ್ಕಳ ಸಾವು

pumpkin
ಸಾಂದರ್ಭಿಕ ಚಿತ್ರ
Published on

ರೋಹ್ಟಕ್‌: ಕುಂಬಳಕಾಯಿಯಿಂದ ತಯಾರಸಿದ ಖಾದ್ಯ ತಿಂದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ರೋಹ್ಟಕ್​ ಬಳಿಯ ಬಲಾಂದ್​ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದಿವ್ಯಾ(7) ಇಯಾಂಶು (2) ಮತ್ತು ಲಕ್ಷಿತಾ (8) ಎಂದು ಗುರುತಿಸಲಾಗಿದ್ದು, ಗಣಿಕಾ (10) ಸ್ಥಿತಿ ಚಿಂತಾಜನಕವಾಗಿದೆ. ಕುಟುಂಬದ ಇತರ ಸದಸ್ಯರಾದ ರಾಕೇಶ್ ಮತ್ತು ಆತನ ಪತ್ನಿ ಮೋನಿಕಾ, ರಾಜೇಶ್ ಮತ್ತು ಆತನ ಪತ್ನಿ ಸೀಮಾ, ಹಿರಿಯ ಮಗ ಜತಿನ್ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್ 15ರ ರಾತ್ರಿ ಮನೆಯಲ್ಲಿ ಪೇಠೆ ಕಿ ಸಬ್ಜಿ ಅಂದರೆ ಕುಂಬಳಕಾಯಿ ಖಾದ್ಯ ತಯಾರಿಸಿ, ತಿಂದು ಮಲಗಿದ್ದರು. ತಡರಾತ್ರಿ ಒಂದೇ ಕುಟುಂಬದ ಒಂಬತ್ತು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋಗಿದ್ದರು. ಈ ವೇಳೆ ವೈದ್ಯರು ಔಷಧಿ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ, ಮನೆಗೆ ಬಂದ ಮೇಲೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಾಗಿದ್ದಾರೆ. ಈ ವೇಳೆ ಚಿಕಿತ್ಸೆಗೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಬಗ್ಗೆ ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಕುಟುಂಬದ ಸದಸ್ಯರ ದೂರು, ಆಹಾರದ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಶಿವಾಜಿ ಕಾಲೋನಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net