ರಸ್ತೆಯ ಬದಿ ಬಿದ್ದಿದ್ದ ಬ್ಯಾಗ್​ನಲ್ಲಿ ಮಹಿಳೆ ಶವ! ಗುರುತು ಹಿಡಿದವರಿಗೆ 25,000 ರೂ. ಘೋಷಿಸಿದ ಪೊಲೀಸ್| ​​Trolley Bag

Trolley Bag
Published on

Gurugram: ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಟ್ರಾಲಿ ಬ್ಯಾಗ್​​ನಲ್ಲಿ (Trolley Bag) ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಗುರುಗ್ರಾಮದಲ್ಲಿ ಭಾನುವಾರ (ಮೇ.4) ಬೆಳಕಿಗೆ ಬಂದಿದೆ.

ಶಿವ ನಾಡರ್ ಶಾಲೆ ಬಳಿಯ ರಸ್ತೆಬದಿಯಲ್ಲಿ ರಕ್ತಸಿಕ್ತವಾಗಿ ಕಪ್ಪು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಆಳವಾದ ಗಾಯಗಳಾಗಿದ್ದು, ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದೆ, ಮೃತ ವ್ಯಕ್ತಿಗೆ ಸುಮಾರು 30-35 ವರ್ಷ ವಯಸ್ಸಾಗಿರಬಹುದು ಎಂದು ಪೊಲೀಸ್​​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುರುಗ್ರಾಮ ಪೊಲೀಸರು ಶವವನ್ನು ಗುರುತಿಸಿದವರಿಗೆ 25,000 ರೂ. ಬಹುಮಾನ ಘೋಷಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಶವವನ್ನು ಬೇರೆಡೆಯಿಂದ ತಂದು ಇಲ್ಲಿ ಎಸೆಯಲಾಗಿದೆ ಎಂದು ಕಂಡುಬಂದಿದೆ . ಮೃತ ಮಹಿಳೆ ಹಸಿರು ಟಾಪ್ ಮತ್ತು ಹಸಿರು ಜೀನ್ಸ್ ಧರಿಸಿದ್ದು, ಬಲಗೈಗೆ ಬಳೆ ಹಾಕಿದ್ದಾಳೆ ಜೊತೆಗೆ ಬಲಗೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ . ಎಡಗೈಯ ಹೆಬ್ಬೆರಳಿನ ಮೇಲೆ 8 ನೇ ಸಂಖ್ಯೆಯ ಹಚ್ಚೆ ಹಾಕಿಸಿಕೊಂಡಿದ್ದಾರೆ ಮತ್ತು ಎಡ ಭುಜದ ಕೆಳಗೆ 'ಮಾ' ಎಂದು ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ಗುರುತಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಮೃತರನ್ನು ಗುರುತಿಸುವವರಿಗೆ 25,000 ರೂ. ಬಹುಮಾನವನ್ನು ಘೋಷಿಸಲಾಗಿದೆ, ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net