ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್​ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ

Bus 1
Published on

ಬೆಂಗಳೂರು: ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಯುವತಿಯೊಬ್ಬರು ಬಸ್​ ಕಂಡಕ್ಟರ್ ಬಳಿ ಜಗಳವಾಡಿದ ಪ್ರಕರಣ ನಡೆದಿದೆ. ಬನಶಂಕರಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್​ನಲ್ಲಿ ಈ ಘಟನೆ ನಡೆದಿದೆ.

ನಾನು ಕೇಂದ್ರ ಸರ್ಕಾರದ ಉದ್ಯೋಗಿ ಎಂದು ಹೇಳಿಕೊಂಡ ಈ ಯುವತಿ ಟಿಕೆಟ್​ ತೆಗೆದುಕೊಳ್ಳಲು ನಿರಾಕರಿಸಿದ್ದಲ್ಲದೆ ಕಂಡಕ್ಟರ್​ ಬಳಿ ಜಗಳವಾಡಿದ್ದಾಳೆ. ನನ್ನ ಬಳಿ ಕೇಂದ್ರ ಸರ್ಕಾರದ ಐಡಿ ಕಾರ್ಡ್ ಇದೆ, ಏನ್ ಮಾಡ್ತಿಯೋ ಮಾಡ್ಕೊ ಎಂದು ದಬಾಯಿಸಿದ್ದಾಳೆ.

ಗುರುತಿನ ಚೀಟಿ ತೋರಿಸಿ ಎಂದರೂ ತೋರಿಸದ ಈಕೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳನ್ನು ಬಳಸಿ ಜಗಳವಾಡಿದ್ದಾಳೆ. ಮೊಬೈಲ್​ಫೋನ್​ ಮೂಲಕ ಆಧಾರ್ ಪ್ರೂಫ್ ತೋರಿಸಿದ್ದರೂ ಅದರಲ್ಲೂ ರಾಜ್ಯ ಯಾವುದು ಎಂಬುದು ಇರಲಿಲ್ಲ.

ಟಿಕೆಟ್ ತೆಗೆದುಕೊಳ್ಳಿ ಎಂದರೆ ಮೊಬೈಲ್​ಫೋನ್​ನಲ್ಲಿ ವಿಡಿಯೋ ಮಾಡುತ್ತಿದ್ದ ಈ ಯುವತಿಗೆ, ಸೆಂಟ್ರಲ್ ಗವರ್ನಮೆಂಟ್ ಉದ್ಯೋಗಿ ಎನ್ನುವುದಕ್ಕೆ ಯಾವ ಪ್ರೂಫ್ ಇದೆ ಎಂದು ಸಹಪ್ರಯಾಣಿಕರು ಕೇಳಿದರೆ ಅವರೊಂದಿಗೂ ಗಲಾಟೆ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net