ಮೃತ ಯುವಕನಿಗೆ ಮತ್ತೆ ವೆಂಟಿಲೇಟರ್ ಹಾಕಿ ಎಂದು ಗಲಾಟೆ, ಮಹಿಳಾ ವೈದ್ಯರ ಮೇಲೆ ಹಲ್ಲೆ

Doctor
Published on

ಮುಂಬೈ: ಕರೊನಾ ಶುರುವಾದ ಮೇಲೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವ ಪ್ರಮಾಣವೂ ಹೆಚ್ಚಾಗಿದೆ. ಕರೊನಾ ಟೆಸ್ಟ್ ಮಾಡಲು ಹೋದವರಿಗೆ ಥಳಿಸುವುದು...ಯಾರೋ ಸತ್ತರೆಂದು ಅವರ ಸಂಬಂಧಿಕರು ವೈದ್ಯರನ್ನು ಹೊಡೆಯುವ ಘಟನೆಗಳು ಪದೇಪದೆ ನಡೆಯುತ್ತಲೇ ಇವೆ.

ಇದೀಗ ಅಂಥದ್ದೇ ಒಂದು ಪ್ರಕರಣ ಬೃಹನ್​ ಮುಂಬೈ ಕಾರ್ಪೋರೇಶನ್​ ನ ಕೆಇಎಂ ಆಸ್ಪತ್ರೆಯಲ್ಲಿ ನಡೆದಿದೆ. ಐಸಿಯುವಿನಲ್ಲಿದ್ದ 18 ವರ್ಷದ ರೋಗಿಯೋರ್ವ ಸತ್ತಿದ್ದಕ್ಕೆ ಸುಮಾರು 30 ಮಂದಿ ಸೇರಿ ಮಹಿಳಾ ವೈದ್ಯೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

ಜತಿನ್​ ಪಾರ್ಮರ್​ ಎಂಬ 18 ವರ್ಷದ ಯುವಕ ಹೃದಯಸ್ತಂಭನದಿಂದ ಐಸಿಯುನಲ್ಲಿ ಮೃತಪಟ್ಟಿದ್ದ. ಆದರೆ ಅವನ ಸಂಬಂಧಿಕರು ಸುಮಾರು 30 ಮಂದಿ ಆಸ್ಪತ್ರೆಗೆ ಆಗಮಿಸಿ ಐಸಿಯುವಿಗೆ ನುಗ್ಗಲು ಯತ್ನಿಸಿದ್ದಾರೆ. ಜತಿನ್​ ಸತ್ತಿಲ್ಲ ಎಂದೇ ಪ್ರತಿಪಾದಿಸಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಹಾಗೇ ಹಲ್ಲೆಯನ್ನೂ ಮಾಡಿದ್ದಾರೆ. ಅದರ ವಿಡಿಯೋಗಳು ಕೂಡ ಎಲ್ಲೆಡೆ ವೈರಲ್​ ಆಗಿವೆ.

ಜತಿನ್​ ಮೃತಪಟ್ಟಿಲ್ಲ. ಅವನನ್ನು ಇನ್ನೊಮ್ಮೆ ವೆಂಟಿಲೇಟ್​​ನಲ್ಲಿ ಇಡಿ ಎಂದು ಸಂಬಂಧಿಕರು ಕೂಗಾಡಿದ್ದಾರೆ. ಅದಾದ ಬಳಿಕ ಹಿರಿಯ ವೈದ್ಯಾಧಿಕಾರಿಗಳು, ಪೊಲೀಸ್​​ ಅಧಿಕಾರಿಗಳು ಅಲ್ಲಿಗೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.  ಇದನ್ನೂ ಓದಿ: ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?

ಜತಿನ್​ ಸೆಪ್ಟೆಂಬರ್​ 5ರಂದು ರಾತ್ರಿ 9 ಗಂಟೆ ಹೊತ್ತಿಗೆ ಕೆಇಎಂ ಆಸ್ಪತ್ರೆಗೆ ದಾಖಲಾಗಿದ್ದ. ಅವನು ಅಡ್ಮಿಟ್ ಆಗುವ ವೇಳೆ ತುಂಬ ಜ್ವರದಿಂದ ಬಳಲುತ್ತಿದದ್. ಫಿಟ್ಸ್​ ಬರುತ್ತಿತ್ತು ಮತ್ತು ಉಸಿರಾಟಕ್ಕೆ ತೊಂದರೆಪಡುತ್ತಿದ್ದ. ಚಿಕಿತ್ಸೆ ನೀಡಿದರೂ ಫಲಿಸದೆ ಅಂದು ಮಧ್ಯರಾತ್ರಿ 1.20ರ ಹೊತ್ತಿಗೆ ಮೃತಪಟ್ಟಿದ್ದಾನೆ. ಆ ವಿಷಯವನ್ನು ಜತಿನ್​ ಅಂಕಲ್​ ಮತ್ತು ಸೋದರನಿಗೆ ನಾವು ತಿಳಿಸಿದ್ದೆವು ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಮರುದಿನ ಸಂಬಂಧಿಕರು ಆಗಮಿಸಿ ದೊಡ್ಡ ಗಲಾಟೆಯನ್ನೇ ಮಾಡಿದ್ದಾರೆ. ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಐದು ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net