

ನ್ಯೂಯಾರ್ಕ್: ವ್ಯತ್ಯಾಸ ಗುರುತಿಸಿ, ಅಡಗಿದ ವಸ್ತುವನ್ನು ಪತ್ತೆ ಹಚ್ಚಿ, ನಿಮ್ಮ ಮಿದುಳಿಗೊಂದು ಸವಾಲು ಮೊದಲಾದ ಬುದ್ಧಿಮತ್ತೆ ಪರೀಕ್ಷಿಸುವ ಪ್ರಶ್ನೆ ಹಾಗೂ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.
ಹಲವರು ಇಂಥದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅಂತೆಯೇ, ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜೆನ್ಸ್ ಎಜೆನ್ಸಿ (ಸಿಐಎ) ಇಂಥದ್ದೊಂದು ಸವಾಲನ್ನು ತನ್ನ ಫಾಲೋವರ್ಗಳಿಗೆ ಹಾಕಿತ್ತು.
ತನ್ನ ಎರಡು ಫೋಟೋಗಳನ್ನು ಪ್ರಕಟಿಸಿ ಇದರಲ್ಲಿರುವ ಹತ್ತು ವ್ಯತ್ಯಾಸಗಳನ್ನು ಗುರುತಿಸಿ ಎಂದು ಸವಾಲು ಹಾಕಿತ್ತು. ಕೆಲವರು ಒಂದೇ ನಿಮಿಷದಲ್ಲಿ ಕಂಡು ಹಿಡಿದಿದ್ದೇನೆ ಎಂದು ಹೇಳಿಕೊಂಡರೆ, ಮತ್ತೆ ಕೆಲವರು 9 ಮಾತ್ರ ಇದೆ ಎಂದರು.
ಆದರೆ, 10ಕ್ಕಿಂತ ಹೆಚ್ಚು ಕಂಡು ಹಿಡಿದವರು ನಿಜಕ್ಕೂ ಭಾರಿ ಬುದ್ಧಿವಂತರು ಎಂದು ಹೇಳಿತ್ತು. ಎರಡು ಫೋಟೋಗಳು ಇಲ್ಲಿವೆ. ಜತೆಗೆ ಉತ್ತರವೂ ಇದೆ. ನೀವೇ ಪರೀಕ್ಷಿಸಿಕೊಳ್ಳಿ. 10ಕ್ಕಿಂತ ಹೆಚ್ಚು ನಿಮ್ಮ ಕಣ್ಣಿಗೆ ಬಿದ್ದಿದ್ದೇ ಆದಲ್ಲಿ ನಿಜಕ್ಕೂ ಭಾರಿ ಬುದ್ಧಿವಂತರು...!