More

    ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ….!

    ಹೈದರಾಬಾದ್​: ರೈಫಲ್​ಗಳಲ್ಲಿ ಈಗಲೂ ಎ.ಕೆ. -47 ಅತ್ಯಂತ ಮಾರಕ. ಇದರಿಂದ ಅನೂಹ್ಯ ವೇಗದಲ್ಲಿ, ಅಭೇದ್ಯವನ್ನೂ ತೂರಿ ಹೋಗಬಲ್ಲ ಶಕ್ತಿ ಇದರಿಂದ ಸಿಡಿದ ಗುಂಡಿಗಿದೆ.

    ಈ ರೈಫಲ್​ಅನ್ನು ಹತ್ತಾರು ಬಾರಿ ಅಭಿವೃದ್ಧಿಪಡಿಸಿ ಹೊಸ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ. ಇಂಥ ರೈಫಲ್​ನಿಂದ ಸಿಡಿದ ಗುಂಡನ್ನು ಸಮರ್ಥವಾಗಿ ತಡೆದು, ಪ್ರಾಣ ರಕ್ಷಣೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಈ ಭಾಭಾ ಕವಚ….!

    ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಕ್ಷಮತೆ ಸಾಬೀತು; ಪ್ರಾಣಿಗಳಲ್ಲಿ ಪ್ರಯೋಗ ಯಶಸ್ವಿ 

    ಇದೇನು ಅಂತೀರಾ….! ಯಾವ ಬಾಬಾ ತಯಾರಿಸಿದ್ದು ಈ ಕವಚವನ್ನು ಎಂಬ ಕುತೂಹಲ ಮೂಡಬಹುದು. ಇದರ ಹೆಸರು ‘ಭಾಭಾ ಕವಚ’ವೇ ಹೆಸರು ನೀವಂದುಕೊಂಡಂತೆ ಯಾವುದೋ ಬಾಬಾ ತಯಾರಿಸಿದ್ದಲ್ಲ.

    ಹೈದರಾಬಾದ್​ನ ಕಂಚನ್​ಬಾಗ್​ ಪ್ರದೇಶದಲ್ಲಿರುವ ಕೇಂದ್ರ ಸರ್ಕಾರ ಅಧೀನದ ಮಿಶ್ರಧಾತು ನಿಗಮ ಇದನ್ನು ತಯಾರಿಸಿದೆ. ಇದನ್ನು ಭಾಭಾ ಅಣುಶಕ್ತಿ ಸಂಶೋಧನಾ ಸಂಸ್ಥೆ ಈ ಗುಡುಂ ನಿರೋಧಕ ಕವಚವನ್ನು ಅಭಿವೃದ್ಧಿಪಡಿಸಿರುವುದರಿಂದ ಇದನ್ನು ಭಾಭಾ ಕವಚ ಎಂದು ಹೆಸರಿಸಲಾಗಿದೆ. ಚೀನಾದ ಗಡಿಯಲ್ಲೀಗ ಉದ್ವಿಗ್ನ ಸ್ಥಿತಿ ನೆಲೆಸಿರುವ ಸಂದರ್ಭದಲ್ಲಿಯೇ ಇದು ತಯಾರಾಗಿದೆ. ಈಗಾಗಲೇ ನೂರಾರು ಸಂಖ್ಯೆಯಲ್ಲಿ ಇದನ್ನು ತಯಾರಿಸಿ ಅರೆ ಸೇನಾಪಡೆಗಳ ಯೋಧರಿಗೆ ಪೂರೈಸಲಾಗಿದೆ.

    ಇದನ್ನೂ ಓದಿ; ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್​ಡೌನ್​ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ….! 

    ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ....!

    ಬುಲೆಟ್​ಫ್ರೂಪ್​ ಜಾಕೆಟ್​ಗಳನ್ನು ತಯಾರಿಸುವ ತಾಂತ್ರಿಕತೆಯಲ್ಲಿ ನಾವು ನೈಪುಣ್ಯತೆ ಪಡೆದಿದ್ದೇವೆ. ಇದನ್ನು ಬೃಹತ್​ ಪ್ರಮಾಣದಲ್ಲಿ ಉತ್ಪಾದಿಸುವ ಕ್ಷಮತೆಯೂ ನಮಗಿದೆ. ವಿಶ್ವ ವಿವಿಧೆಡೆಗಳಲ್ಲಿ ತಯಾರಿಸಲಾಗುವ ಶಸ್ತ್ರಾಸ್ತ್ರಗಳನ್ನು ಗಮನಿಸಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ್​ಕುಮಾರ್​ ಝಾ ಹೇಳಿದ್ದಾರೆ.

    ಸಂಸ್ಥೆಯಲ್ಲಿ ತಯಾರಿಸಲಾದ ಬುಲೆಟ್​ಪ್ರೂಫ್​ ಜಾಕೆಟ್​ಗಳು ಕೇಂದ್ರ ಗೃಹ ಸಚಿವಾಲಯದ ಮಾನದಂಡಗಳಿಗೆ ಅನುಗುಣವಾಗಿವೆ ಹಾಗೂ ಬಿಐಎಸ್​-6 ಮಾನದಂಡಗಳನ್ನೂ ಪಾಲಿಸಿವೆ ಎಂದು ಝಾ ತಿಳಿಸಿದ್ದಾರೆ.

    ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts