ಕುಟುಂಬದವರೊಂದಿಗೆ ಪಿಕ್ನಿಕ್​ಗೆ ತೆರಳಿದ್ದ ಮಹಿಳೆ ದುರ್ಮರಣ

Selfee
Published on

ಸೆಲ್ಫಿ ಕ್ರೇಜಿಗೆ ಮಹಿಳೆಯೋರ್ವರು ಜೀವ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಇಂಧೋರ್​ನಲ್ಲಿ ನಡೆದಿದೆ. ನೀತು ಮಹೇಶ್ವರಿ (30) ಮೃತರು.

ನೀತು ತನ್ನ ಕುಟುಂಬದವರೊಂದಿಗೆ ಇಂಧೋರ್​​ನ ಬಳಿ ಜಾಮ್ ಗೇಟ್​​ಗೆ ಪಿಕ್ನಿಕ್​ಗೆ ತೆರಳಿದ್ದರು. ಗುಡ್ಡದ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ನೀತು, ಆಯತಪ್ಪಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು 4 ತಾಸುಗಳ ಬಳಿಕ ಕಣಿವೆಯಿಂದ ಶವವನ್ನು ಹೊರತೆಗೆಯಲಾಗಿದೆ. ಮೃತದೇಹವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದೇವೆಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net