More

    ಒಂದೇ ರಾಕೆಟ್​ನಲ್ಲಿ 13 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾತು ಚೀನಾ

    ಬೀಜಿಂಗ್​: ಅರ್ಜೆಂಟೀನಾದ 10 ಉಪಗ್ರಹಗಳು ಸೇರಿ ಒಟ್ಟು 13 ಉಪಗ್ರಹಗಳನ್ನು ಒಂದೇ ರಾಕೆಟ್​ನಲ್ಲಿ ಉಡಾವಣೆ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನುಹಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಮ್ಯೂನಿಸ್ಟ್ ರಾಷ್ಟ್ರ ಇದೇ ಮೊದಲ ಬಾರಿಗೆ ಇಷ್ಟುದೊಡ್ಡ ಪ್ರಮಾಣದ ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿದ್ದು, ಲಕ್ಷಾಂತರ ಡಾಲರ್ ಆದಾಯವನ್ನು ಗಳಿಸಿದೆ.

    ಅರ್ಜೆಂಟೀನಾದ ಸ್ಟೆಲ್ಲೋಜಿಕ್​ ಎಂಬ ಕಂಪನಿ ತಯಾರಿಸಿದ 10 ವಾಣಿಜ್ಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳನ್ನು ಚೀನಾ ತನ್ನ ಲಾಂಗ್​ ಮಾರ್ಚ್​ -6 ಕ್ಯಾರಿಯರ್ ರಾಕೆಟ್ ಮೂಲಕ ತೈಯುವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶುಕ್ರವಾರ ಉಡಾವಣೆ ಮಾಡಿದೆ. ಇದು ಈ ರಾಕೆಟ್​ನ 351ನೇ ಉಡಾವಣೆಯಾಗಿದೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಗೆಲುವಿನ ಸನಿಹದಲ್ಲಿದ್ದಾರೆ ಬಿಡೆನ್​

    ಈ ಉಡಾವಣೆ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಲಾಂಗ್ ಮಾರ್ಚ್​ 6 ಅನ್ನು ಉತ್ತೇಜಿಸುವ ಉದ್ದೇಶ ಚೀನಾಕ್ಕಿದೆ. ಅದಕ್ಕೆ ಈಗ ಉತ್ತೇಜನ ಸಿಕ್ಕಂತಾಗಿದೆ. ಚೀನಾ ಈಗಾಗಲೇ ಮಿತ್ರ ರಾಷ್ಟ್ರಗಳ ಉಪಗ್ರಹಗಳನ್ನು ಕಕ್ಷೆ ಉಡಾವಣೆ ಮಾಡುವ ಕೆಲಸ ಮಾಡಿದ್ದು, ಬಾಹ್ಯಾಕಾಶ ವಾಣಿಜ್ಯ ಮಾರುಕಟ್ಟೆಗೆ ತೆರೆದುಕೊಳ್ಳತೊಡಗಿದೆ. (ಏಜೆನ್ಸೀಸ್)

    ಮನೆಯ ಗೋಡೆಯ ಹಿಂದಿತ್ತು 5 ವರ್ಷ ಹಿಂದಿನ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts