More

    ಮನೆಯ ಗೋಡೆಯ ಹಿಂದಿತ್ತು 5 ವರ್ಷ ಹಿಂದಿನ ಶವ!

    ಸೂರತ್​: ಮನೆಯ ಗೋಡೆಯ ಹಿಂದೆ 5 ವರ್ಷ ಹಿಂದಿನ ಶವ ಪತ್ತೆಯಾಗಿದ್ದು, ಅದರ ಗುರುತು ಪತ್ತೆಯಾಗದಷ್ಟು ಕೊಳೆತು ಹೋಗಿದೆ. ಇದೊಂದು ಕೊಲೆ ಪ್ರಕರಣವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗುರುವಾರ ಒಬ್ಬನನ್ನು ಬಂಧಿಸಿದ್ದಾರೆ.

    ಮೃತನನ್ನು ಕಿಶನ್ ಚೌಹಾನ್ ಎಂದೂ, ಬಂಧಿತನನ್ನು ಬಿಹಾರ ಮೂಲದ ರಾಜೀವ್ ರಜಪೂತ್ (37) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಸೂರತ್ ಕ್ರೈಂ ಬ್ರಾಂಚ್ ಪೊಲೀಸರು ಪಂಡೇಸರ ಪ್ರದೇಶದಲ್ಲಿರುವ ರಜಪೂತ್ ಮನೆಗೆ ದಾಳಿ ನಡೆಸಿದ್ದರು. ಅಚಾನಕ್ ಬಂದ ಪೊಲೀಸರನ್ನು ಕಂಡು ಹೆದರಿದ ರಜಪೂತ್​ ಆರಂಭದಲ್ಲಿ ಸುಳ್ಳು ಹೇಳಿದರೂ, ಗೋಡೆ ಒಡೆಸಿದಾಗ ಹಿಂಬದಿಯಲ್ಲಿ ಕೊಳೆತು ನಾರುತ್ತಿದ್ದ ಶವ ಪತ್ತೆಯಾಗಿದೆ. ಪೊಲೀಸರು ಅದನ್ನು ಸಂಗ್ರಹಿಸಿ ಫಾರೆನ್ಸಿಕ್ ಪರೀಕ್ಷೆಗೆ ರವಾನಿಸಿದ್ದಾರೆ.

    ಇದನ್ನೂ ಓದಿ: ಅಫಿಡವಿಟ್​ನಲ್ಲಿ ಆಸ್ತಿ ವಿವರ ಮರೆಮಾಚಿ ಶಾಸಕತ್ವ ಕಳೆದುಕೊಂಡ ಮಾಜಿ ಕಾಂಗ್ರೆಸ್​ ನಾಯಕ

    ವಿಚಾರಣೆ ವೇಳೆ ಈತ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಐದು ವರ್ಷದ ಹಿಂದೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದು ಸಿಟ್ಟಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದ. ಅದಾಗಿ ಕೊಲೆ ಪ್ರಕರಣ ಬಹಿರಂಗವಾಗದಿರಲಿ ಎಂದು ಶವವನ್ನು ಮೂಲೆಗೆ ದೂಡಿ ಅದರ ಎದುರೇ ಗೋಡೆ ನಿರ್ಮಿಸಿದ್ದ. ಇನ್ನೊಂದೆಡೆ ಚೌಹಾನ್ ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬದವರೂ ದೂರು ದಾಖಲಿಸಿಲ್ಲ. ಹೀಗಾಗಿ ಇಷ್ಟು ವರ್ಷ ಇದು ಬಹಿರಂಗವಾಗಿರಲಿಲ್ಲ. (ಏಜೆನ್ಸೀಸ್)

    ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಗೆಲುವಿನ ಸನಿಹದಲ್ಲಿದ್ದಾರೆ ಬಿಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts