ಅಂತ್ಯಸಂಸ್ಕಾರದ ಬಳಿಕ ವಾಗ್ವಾದ: ಆಕೆಯ ಸಾವಿಗೆ ಕಾರಣ ಹೊಟ್ಟೆನೋವೋ, ಆತನೋ?

Anjali
ಗಂಗಾಧರ್ ಬಂಧನಕ್ಕೆ ಒತ್ತಾಯಿಸಿ ಆತನ ಮನೆ ಮುಂದೆ ಜಮಾಯಿಸಿರುವ ಗ್ರಾಮಸ್ಥರು
Published on

ಬಳ್ಳಾರಿ: ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಆಕೆಯ ಸಾವಿನ ಕುರಿತಂತೆ ಈಗ ವಿವಾದ ಉಂಟಾಗಿದೆ. ಆಕೆ ಸತ್ತಿದ್ದು ಹೊಟ್ಟೆನೋವಿನಿಂದಾಗಿಯೋ ಅಥವಾ ಗಂಡನಿಂದಾಗಿಯೋ ಎಂಬ ಕುರಿತು ವಾಗ್ವಾದ ನಡೆಯಲಾರಂಭಿಸಿದ್ದು, ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಜಲಿ ಎಂಬ ಗೃಹಿಣಿಯ ಶವ ನಿನ್ನೆ ನೇಣು ಹಾಕಿದ ಸ್ಥಿತಿಯಲ್ಲಿ ಮನೆಯಲ್ಲೇ ಕಂಡುಬಂದಿತ್ತು. ಆಕೆ ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಈಗ ಆಕೆಯದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಗ್ರಾಮಸ್ಥರಿಂದ ಗಲಾಟೆ ಎಬ್ಬಿಸಿದ್ದಾರೆ. ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿನ್ನೆ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಅಂತಿಮ ಸಂಸ್ಕಾರ ಮಾಡಲಾಗಿದೆ. ಆದರೆ ಗ್ರಾಮಸ್ಥರು ಈಗ ಅದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆಕ್ಷೇಪ ಎತ್ತಿದ್ದಾರೆ.

ಗಂಡನ ಕಡೆಯವರು ಇದೊಂದು ಆತ್ಮಹತ್ಯೆ ಎನ್ನುತ್ತಿದ್ದಾರೆ. ಆದರೆ ಗ್ರಾಮಸ್ಥರು ಇದನ್ನು ಕೊಲೆ ಎನ್ನುತ್ತಿದ್ದಾರೆ ಎಂದು ಅಂಜಲಿಯ ತವರು ಮನೆಯವರು ಹೇಳುತ್ತಿದ್ದಾರೆ. ಪತಿ ಗಂಗಾಧರನೇ ಕೊಲೆ ಮಾಡಿದ್ದು, ನೇಣು ಹಾಕಿಕೊಂಡಿದ್ದಾಳೆ ಎಂದು ನಾಟಕವಾಡಿದ್ದಾರೆ ಎಂಬುದಾಗಿ ಗ್ರಾಮಸ್ಥರು ಆರೋಪಿಸಿ, ಆತನ ಮನೆಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಗಾಧರನನ್ನು ಬಂಧಿಸುವಂತೆ ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net