More

    ವೃದ್ಧ ಚಿಲ್ಲರೆ ಕೊಟ್ಟಿದ್ದಕ್ಕೆ ಸಾಲಲ್ಲ ಎಂದು 6 ಸಾವಿರ ರೂ. ಕಸಿದುಕೊಂಡು ಹೋದ ಮಂಗಳಮುಖಿಯರ ಬಂಧನ

    ಬೆಂಗಳೂರು: ಇತ್ತೀಚೆಗೆ ಗೃಹಪ್ರವೇಶ ಸಂದರ್ಭದಲ್ಲಿ ಮನೆಯೊಂದರ ಬಳಿ ಮಂಗಳಮುಖಿಯರು ರಂಪ ಮಾಡಿದ್ದರು. ಇದೀಗ ವೃದ್ಧರೊಬ್ಬರಿಂದ ಹಣ ಕಸಿದುಕೊಂಡು ಹೋಗಿದ್ದ ನಾಲ್ವರು ಮಂಗಳಮುಖಿಯರ ಬಂಧನವಾಗಿದೆ. ವೃದ್ದನ ಬಳಿ ಹಣ ಕಸಿದುಕೊಂಡು ಪರಾರಿಯಾಗಿದ್ದ ಮೂವರು ಮಂಗಳಮುಖಿಯರ ಸಹಿತ ನಾಲ್ವರು ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಪೂಜಿನಗರ ನಿವಾಸಿಗಳಾದ ಸ್ನೇಹಾ, ಅವಿಷ್ಕಾ, ದೀಪಿಕಾ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು.

    ಪ್ರಕಾಶ್‌ನ ಆಟೋದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಕೆಲಸಕ್ಕೆ ತೆರಳುವ ಟೆಕ್ಕಿಗಳು, ರಸ್ತೆ ಬದಿ ಒಂಟಿಯಾಗಿ ಸಿಗುವವರ ಬಳಿ ಹಣ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಜೂ.23ರ ಬೆಳಗಿನ ಜಾವ 6.30ರ ಸಮಯದಲ್ಲಿ ಏರ್‌ಪೋರ್ಟ್​ಗೆ ತೆರಳುವ ಸಲುವಾಗಿ ಹೆಬ್ಬಾಳ ಫ್ಲೈ ಓವರ್ ಸಮೀಪದಲ್ಲಿರುವ ಎಸ್ಟೀಮ್ ಮಾಲ್‌ ಬಳಿಯ ಬಸ್‌ ನಿಲ್ದಾಣದಲ್ಲಿ ನಿಂತಿದ್ದ 70 ವರ್ಷದ ವೃದ್ಧನ ಬಳಿ ಬಂದಿದ್ದ ಮಂಗಳಮುಖಿಯರು ಹಣ ಕೇಳಿದ್ದರು. ವೃದ್ಧ ಚಿಲ್ಲರೆ ಹಣ ನೀಡಿದಾಗ, ‘ಇಷ್ಟು ಹಣ ಸಾಕಾಗುವುದಿಲ್ಲ’ ಎಂದು ಆತನ ಬಳಿ ಇದ್ದ 6 ಸಾವಿರ ರೂ. ಕಸಿದುಕೊಂಡು ಪರಾರಿಯಾಗಿದ್ದರು.

    ಇದನ್ನೂ ಓದಿ: ಶ್ರೀಲಂಕಾದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಕಸ್ತೂರಿರಂಗನ್​ಗೆ ಬೆಂಗಳೂರಲ್ಲಿ ಸ್ಟೆಂಟ್ ಅಳವಡಿಕೆ

    ಈ ಬಗ್ಗೆ ಹಣ ಕಳೆದುಕೊಂಡಿದ್ದ ವೃದ್ಧ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕೊಡಿಗೆಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡು ಸುಲಿಗೆಕೋರರ ಗುಂಪನ್ನು ಬಂಧಿಸಿದ್ದಾರೆ. ನಿತ್ಯ ಬೆಳಿಗ್ಗೆ 5ರಿಂದ 8ರವರೆಗೂ ಸುಲಿಗೆ ಮಾಡುವುದನ್ನೇ ಮೈಗೂಡಿಸಿಕೊಂಡಿದ್ದ ಆರೋಪಿಗಳ ವಿರುದ್ಧ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿಯೂ ಕೃತ್ಯ ಎಸಗಿರುವ ಆರೋಪವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts