ಏಳು ವರ್ಷದ ಪ್ರೀತಿ, ಮದ್ವೆ ಬಳಿಕ ಅನುಮಾನ; ರಾಜಿಯಾದರೂ ನಿಲ್ಲದ ಪತಿಯ ಕಿರುಕುಳ, ನೇಣು ಹಾಕಿಕೊಂಡ ಪತ್ನಿ

Couple
Published on

ದೇವನಹಳ್ಳಿ: ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ಅನುಮಾನ ಉಂಟಾಗಿ, ಕಿರುಕುಳಕ್ಕೆ ತಿರುಗಿ ಅದೀಗ ಒಬ್ಬರ ಸಾವಿನಲ್ಲಿ ಕೊನೆಗೊಂಡಿದೆ. ಪತಿಯ ಅನುಮಾನ ಹಾಗೂ ಕಿರುಕುಳ ಎದುರಿಸಲಾಗದೆ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ನಿವಾಸಿ ದೀಪ (27) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಾರ್ಪೆಂಟರ್ ಆಗಿರುವ, ಪತಿ ಮೋಹನ್​ಕುಮಾರ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.

ಕಳೆದ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇಬ್ಬರ ಮಧ್ಯೆ ಮದುವೆಯಾದ ಮೂರು ವರ್ಷಗಳ ಬಳಿಕ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿ, ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ದಂಪತಿ ಮಧ್ಯೆ ಕುಟುಂಬಸ್ಥರು ಎರಡು ಸಲ ರಾಜಿ ಪಂಚಾಯಿತಿ ನಡೆಸಿದ್ದರು. ಕಳೆದ ವಾರ ನಡೆದ ಎರಡನೇ ರಾಜಿ ಬಳಿಕ ದೀಪಾಳನ್ನು ಕುಟುಂಬಸ್ಥರು ಗಂಡನ ಮನೆಗೆ ಕಳಿಸಿದ್ದರು. ಆದರೆ ಗಂಡನ ಮನೆಗೆ ಬಂದ ನಾಲ್ಕು ದಿನಕ್ಕೆ ಗೃಹಿಣಿ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಗಂಡನ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net