ನಾಲ್ಕು ತಿಂಗಳಿನಿಂದ ಸ್ನಾನವನ್ನೇ ಮಾಡದ ಯುವತಿ; ಫ್ಲ್ಯಾಟ್​ನಿಂದಲೇ ಹೊರಹಾಕಿದ ರೂಮ್​ಮೇಟ್​

Lady
ಸಾಂದರ್ಭಿಕ ಚಿತ್ರ
Published on

ನವದೆಹಲಿ: ನಾಲ್ಕು ತಿಂಗಳಲ್ಲಿ ಒಮ್ಮೆಯೂ ಸ್ನಾನ ಮಾಡದ 18 ವರ್ಷದ ಯುವತಿಯಿಂದ ಬೇಸತ್ತ ರೂಮ್​ಮೇಟ್​ ಆಕೆಯನ್ನು ಫ್ಲ್ಯಾಟ್​ನಿಂದಲೇ ಹೊರಹಾಕಿದ ಪ್ರಕರಣವೊಂದು ನಡೆದಿದೆ. ಜತೆಗಿದ್ದ ಯುವತಿ ಸ್ವಚ್ಛತೆಗೆ ಮಹತ್ವ ನೀಡುತ್ತಿಲ್ಲ ಎಂದು 23 ವರ್ಷದ ರೂಮ್​ಮೇಟ್ ಆಕೆಯನ್ನು ಫ್ಲ್ಯಾಟ್​ನಿಂದ ಹೊರಹಾಕಿದ್ದಾಗಿ ಹೇಳಿಕೊಂಡಿದ್ದಾಳೆ.

ನಾವಿಬ್ಬರೂ ನಾಲ್ಕು ತಿಂಗಳಿನಿಂದ ಜೊತೆಗಿದ್ದೇವೆ. ಸ್ನಾನ ಮಾಡದ ಅವಳೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ನಾಲ್ಕು ತಿಂಗಳಿಂದ ಒಮ್ಮೆಯೂ ಆಕೆ ಸ್ನಾನ ಮಾಡಿಲ್ಲ. ಅದರಲ್ಲೂ ಆಕೆ ಬೆಳಗ್ಗೆ 2 ಗಂಟೆ ರನ್ನಿಂಗ್ ಹೋಗುತ್ತಾಳೆ. ಹಾಗೆ ಬೆವರಿದ್ದರೂ ಆಕೆ ಸ್ನಾನ ಮಾಡುತ್ತಿಲ್ಲ. ಆ ವಾಸನೆ ನನಗೆ ಹೊಟ್ಟೆ ತೊಳೆಸಿದಂತಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ನಾನು ಆ ಬಗ್ಗೆ ಅವಳ ಬಳಿ ಹಲವು ಸಲ ಹೇಳಿಕೊಂಡಿದ್ದರೂ ಆಕೆ ಮಾಡುತ್ತೇನೆ ಎಂದರೂ ಮತ್ತೆ ಮಾಡುತ್ತಿರಲಿಲ್ಲ. ವಾಸನೆ ಬರುತ್ತಿದ್ದರೂ ಆಕೆ ಸ್ನಾನ ಮಾಡುತ್ತಿರಲಿಲ್ಲ. ಒಂದೇ ಸ್ನಾನ ಮಾಡು ಇಲ್ಲವೇ ಫ್ಲ್ಯಾಟ್​ನಿಂದ ಹೊರಹಾಕುವುದಾಗಿ ಹೇಳಿದೆ. ಕೊನೆಗೂ ಸ್ನಾನ ಮಾಡದ ಆಕೆಯನ್ನು ಫ್ಲ್ಯಾಟ್​ ಮಾಲೀಕರಿಗೆ ತಿಳಿಸಿ ಅವಳನ್ನು ಹೊರಹಾಕಲಾಗಿದೆ ಎಂದು ಯುವತಿ ರೆಡಿಟ್​​ನಲ್ಲಿ ಹೇಳಿಕೊಂಡಿದ್ದು ವೈರಲ್ ಆಗಿದೆ. ಆದರೆ ಇದು ಎಲ್ಲಿ ನಡೆದಿದ್ದು ಎಂಬಿತ್ಯಾದಿ ಮಾಹಿತಿ ಬಹಿರಂಗಪಡಿಸಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net