

ಉತ್ತರಕನ್ನಡ: ಎದುರಿದ್ದ ವಾಹನ ಕೆಟ್ಟು ನಿಂತಿದ್ದು, ಹಿಂದಿನಿಂದ ಬರುತ್ತಿದ್ದ ವಾಹನವೊಂದು ಅದಕ್ಕೆ ಡಿಕ್ಕಿ ಹೊಡೆದು ಒಬ್ಬ ಸಾವಿಗೀಡಾಗಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ್ ಬಳಿ ಈ ಅಪಘಾತ ಸಂಭವಿಸಿದೆ. ಈ ದಾರಿಯಲ್ಲಿ ಲಾರಿಯೊಂದು ಕೆಟ್ಟು ನಿಂತಿತ್ತು. ಧಾರವಾಡದಿಂದ ಕುಮಟಾ ಕಡೆಗೆ ತೆರಳುತ್ತಿದ್ದ ಲಗೇಜ್ ಕ್ಯಾರಿಯರ್ ವಾಹನ ಈ ಲಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತಗೊಂಡ ತೀವ್ರತೆಗೆ ಲಗೇಜ್ ಕ್ಯಾರಿಯರ್ ವಾಹನದಲ್ಲಿದ್ದ ಸಹಾಯಕ, ಧಾರವಾಡ ಮೂಲದ ಇಸ್ಮಾಯಿಲ್ ರೋಣದ್ ಸಾವಿಗೀಡಾಗಿದ್ದಾನೆ ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಗೇಜ್ ಕ್ಯಾರಿಯರ್ನಲ್ಲಿ ಬಿಸಿಎಮ್ ಹಾಸ್ಟೆಲ್ ಆಹಾರ ಸಾಮಗ್ರಿ ಸಾಗಿಸಲಾಗುತ್ತಿತ್ತು, ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.