14ರ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿ: ವೈದ್ಯರ ವರದಿಯಲ್ಲಿ ಸತ್ಯಾಂಶ ಬಯಲು!

Brttni gray
Published on

ನ್ಯೂಯಾರ್ಕ್​: ಹದಿನಾಲ್ಕು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗುವಾಗ ನೇರವಾಗಿ ಸಿಕ್ಕಿಬಿದ್ದಿದ್ದ ಮಹಿಳೆ ಇದೀಗ ಗರ್ಭಿಣಿಯಾಗಿರುವ ವಿಚಾರ ನ್ಯಾಯಾಲಯದಲ್ಲಿ ಪ್ರಸ್ತಾಪವಾಗಿದೆ.

ಬ್ರಿಟ್ನಿ ಗ್ರೇ (23) ಎಂಬಾಕೆ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವನ್ನು ಹೊರಿಸಲಾಗಿದೆ. ಅರ್ಕಾನಸ್​ನ ಪರಗೌಲ್ಡ್​ ನಿವಾಸಿಯಾಗಿರುವ ಬ್ರಿಟ್ನಿ ಗ್ರೇ, 2020ರ ಸೆಪ್ಟೆಂಬರ್​ನಲ್ಲಿ 14 ವರ್ಷದ ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಳು.

ಕೃತ್ಯ ಎಸಗುವಾಗ ಪ್ರತ್ಯಕ್ಷದರ್ಶಿಗಳಿಗೆ ನೇರವಾಗಿ ಸಿಕ್ಕಿಬಿದ್ದಿದ್ದಳು. ಈ ಬಗ್ಗೆ ಪೊಲೀಸರ ಎದುರು ಹೇಳಿಕೆ ನೀಡಿರುವ ಪ್ರತ್ಯಕ್ಷದರ್ಶಿಗಳು ಗ್ರೇ, ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ. ಬಾಲಕನ ವೀರ್ಯದಿಂದಲೇ ಆಕೆ ಗರ್ಭವತಿ ಆಗಿದ್ದಾಳೆ ಎಂಬುದು ಸಂತ್ರಸ್ತ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಇತ್ತೀಚೆಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತ ಬಾಲಕ ಮತ್ತು ಆರೋಪಿ ಗ್ರೇ ಒಟ್ಟಿಗೆ ಆಸ್ಪತ್ರೆಗೆ ಪ್ರವೇಶಿಸುತ್ತಿರುವ ವಿಡಿಯೋ ತುಣುಕು ಸಹ ಕೋರ್ಟ್​ಗೆ ಲಭ್ಯವಾಗಿದೆ.

ಇಬ್ಬರ ನಡುವೆ ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಬಂಧವಿದೆ ಎಂದು ಪ್ರತ್ಯಕ್ಷದರ್ಶಿ ಆರೋಪಿಸಿದ್ದಾರೆ. ಪ್ರಕರಣ ನಡೆದ ಒಂದು ವರ್ಷದ ಬಳಿಕ ಆಕೆ ಗರ್ಭಿಣಿಯಾದ ಬೆನ್ನಲ್ಲೇ ಈ ವಿಚಾರ ಭಾರಿ ಸುದ್ದಿಯಾಗಿದೆ. ಗ್ರೇ ಗರ್ಭಿಣಿಯಾಗಿರುವುದು ಪೊಲೀಸರು ನೀಡಿರುವ ವರದಿಯಲ್ಲೂ ಸಹ ಖಚಿತವಾಗಿದೆ.

ಕಳೆದ ಮಾರ್ಚ್​ 1ರಂದು ಆಕೆಯನ್ನು ಪ್ರಕರಣದಡಿಯಲ್ಲಿ ಬಂಧಿಸಲಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮತ್ತೆ ಆಕೆ ಏಪ್ರಿಲ್​ 23ಕ್ಕೆ ಕೋರ್ಟ್​ ಮುಂದೆ ಹಾಜರಾಗಬೇಕಿದ್ದು, ಸದ್ಯ ವಿಚಾರಣೆ ಮುಂದುವರಿದಿದೆ. ಗ್ರೇ ವಿರುದ್ಧ ಪ್ರಥಮ ದರ್ಜೆಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net