ಪತ್ನಿ ಎದುರಲ್ಲೇ ಪತಿ ಹತ್ಯೆ ಪ್ರಕರಣ​: ಭೀಮನ ಅಮಾವಾಸ್ಯೆ ದಿನ ಪಾದ ಪೂಜೆ ಮಾಡಿ ಕೊಲೆಗೆ ಮುಹೂರ್ತ ಇಟ್ಟಿದ್ದೇ ಹೆಂಡತಿ

BLG Murder Case
Published on

ಬೆಳಗಾವಿ: ವಡೇರಹಟ್ಟಿ ಗ್ರಾಮದಲ್ಲಿ ಪತ್ನಿ ಎದರೇ ನಡೆದಿದ್ದ ಗಂಡನ ಭೀಕರ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ಶಂಕರ ಜಗಮುತ್ತಿ ಪತ್ನಿ ಪ್ರಿಯಾಂಕಾ ಜಗಮುತ್ತಿಯನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ನಿನ್ನೆ (ಜು.17) ಹತ್ಯೆ ನಡೆದಿದೆ. ಭೀಮನ‌ ಅಮಾವಾಸ್ಯೆ ಹಿನ್ನೆಲೆ ಗಂಡನ ಪಾದ ಪೂಜೆ ಮಾಡಿ, ಕೊಲೆಗೆ ಮುಹೂರ್ತ ಇಟ್ಟಿದ್ದಳು. ಊರ ಹೊರ ವಲಯದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಗಂಡನನ್ನು ಪ್ರಿಯಾಂಕಾ‌ ಕರೆದುಕೊಂಡು ಬಂದಿದ್ದಳು. ಇದಕ್ಕೂ ಮುನ್ನ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್​ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು.

ದೂರದಲ್ಲಿ ನಿಂತಿದ್ದ ಪ್ರಿಯಾಂಕಾ

ದೇವರ ದರ್ಶನ ಮುಗಿಸಿಕೊಂಡು ವಾಪಸ್ಸು ಬರುತ್ತಿದ್ದಂತೆ ಚಾಕುವಿನಿಂದ ಇರಿದು ಶಂಕರ ಜಗಮುತ್ತಿಯನ್ನು ಶ್ರೀಧರ್​ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಂಡು ಬನ್ನಿ ಎಂದು ಹೇಳಿ ಪ್ರಿಯಾಂಕಾ ದೂರದಲ್ಲಿ ನಿಂತಿದ್ದಳು. ಇದೇ ವೇಳೆ ಬಂದ ಶ್ರೀಧರ್​, ಶಂಕರ್​ ಕತ್ತಿಗೆ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ.

ಟೆಕ್ನಿಕಲ್ ಎವಿಡೆನ್ಸ್ ಆಧಾರ

ಕೊಲೆ ಬಳಿಕ ಏನೂ ಗೊತ್ತಿಲ್ಲದಂತೆ ಪ್ರಿಯಾಂಕಾ ಕಣ್ಣೀರಿನ ನಾಟಕವಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ ಇರುವುದು ಬೆಳಕಿಗೆ ಬಂದಿತು. ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಹೀಗೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪ್ರಿಯಾಂಕಾಳನ್ನು ಬಂಧಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿ ಶ್ರೀಧರ್​ನನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net